ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹನಿಗಳು.. ಹನಿಗಳು ..

-ಲಡಾಯಿ ಬಸು


ಬೆಳಗಾಯಿತೆಂಬ
ಸಂಭ್ರಮ
ಕತ್ತಲಲ್ಲಿ ಬೆಳಕಾದ
ಹಣತೆಗಳ ಆರಿಸುವುದು ..!

ಹೂ
ಗಿಡದಿಂದ
ಉದುರಿಬಿದ್ದರೇನಾಯ್ತು …/
ಗಾಳಿ ಹೊತ್ತೊಯ್ದ
ಗಂಧದಲಿ ಬದುಕುವುದು ..!

ಕಣ್ಣೆದುರಿನ ಕತ್ತಲನು
ಇಂಚಿಂಚಾಗಿ ನುಂಗದೆ
ಬೆಳಕಾಗಲು ಬರದು …
ಆ ಸೂರ್ಯ
ಕಲಿತ ಪಾಠ
ಇಷ್ಟೇ ..!

ಇಳಿಬಿದ್ದ ಬೇರುಗಳೇ
ಗಟ್ಟಿ ಇರಲಿಲ್ಲ
ಆದರೂ ನಿನಗಿರುವುದು
ಗಾಳಿಯ ಮೇಲಷ್ಟೇ ಅಪಾದನೆ ..!

ಕತ್ತಲಾಗದಿದ್ದರೆ
ಏನಾಗುತ್ತಿತ್ತು ..?
ಏನಿಲ್ಲ
ಬೆಳಕು ಅಗ್ಗವಾಗಿಯೇ
ಉಳಿದು ಹೋಗುತ್ತಿತ್ತು

ನಿನ್ನ ಹಾಗೆ
ಮುಗಿಲು ಕಣ್ಣು
ತೆರೆಯಿತು
ಹೊರಗೂ ಬೆಳಕಾಯಿತು …!

ಹಗಲಿಡೀ
ಎಷ್ಟೊಂದು ಬೆಳಕಿತ್ತು
ಆದರೇನು …?
ಬಗ್ಗಿ ಒಂದಿಷ್ಟನ್ನೂ
ಎತ್ತಿಕೊಳ್ಳಲಾಗದು …!

ನಿನಗೆ
ಹಗಲು  ತೊಡಿಸಿದ
ಬಟ್ಟೆಗಳನು
ಇರುಳು ಬಿಚ್ಚಿಡಿಸಿತು
ಬೆಳಕು ಮಾತ್ರ
ಹಾಗೇ ಉಳಿಯಿತು ..!

ನೀನು ಕಣ್ಣು
ತೆರೆದರಷ್ಟೇ ಬೆಳಕು
ಆರಂಭದ ಪಾಠದ
ಅಕ್ಷರಗಳು
ಹೆಚ್ಚೆನಿರುವುದಿಲ್ಲ …!
೧೦
ನೀ
ಒಳಗಿರುವಷ್ಟು ಹೊತ್ತು
ಬೆಳಕು
ಅನಾದಿಯೇ …!
೧೧
ಕತ್ತಲೆಯಿದ್ದರೆ
ಸೂರ್ಯನಿದ್ದು ಹೋದ ಮನೆಯಲ್ಲಿ
ಮಿಂಚು ಹುಳುವೂ
ಗುರ್ತಿಸಲ್ಪಡುವುದು…!
೧೨
ಬೆಳಕಲ್ಲ
ಕತ್ತಲು
ಹಣತೆ ಹಚ್ಚುವುದ
ಕಲಿಸಿತು …!
೧೩
ಕತ್ತಲಾಯಿತೆಂದೇ
ಹಣತೆಯಾಗುವ ಅವಕಾಶ
ಕೆಲವರಿಗಾದರೂ ಸಿಕ್ಕಿತು ..!

‍ಲೇಖಕರು avadhi

26 August, 2011

9 Comments

  1. savitri

    ಸರ್ ಹನಿಗಳು ಚೆನ್ನಾಗಿವೆ.

  2. arun joladkudligi

    ಹನಿ ಹಣತೆಗಳು ಬೆಳಕ ಬೀರುವಂತಿವೆ

  3. Shinivas.Halakatti

    ಬಿದ್ದ ಹನಿಗಳು Fentastic….
    ಬೆಳಗಾಯಿತೆಂಬ
    ಸಂಭ್ರಮ
    ಕತ್ತಲಲ್ಲಿ ಬೆಳಕಾದ
    ಹಣತೆಗಳ ಆರಿಸುವುದು .. ಈ ಸಾಲುಗಳು ತುಂಬಾನೆ ಖುಷಿ ಕೊಟ್ವು…..

  4. Hanamant haligeri

    ಮನದ ಕತ್ತಲನ್ನು ಓಡಿಸುವಂತಹ ಹನಿ ಹಣತೆಗಳು

  5. D.RAVIVARMA

    kattlayitende hanateyaguva avakasha kelavadarigu sikkiti wonderful nanage kumvi kate nenapu bantu adu janara savigagi kayuva anivarya stiti varagattale savilla andare avarige koolilla varada nantara yaro sattare avara maneyaylli halige sappala maduttade ole attude baduka estu vichitra aste satyavu haudu nimma hanigalannu naanu tumbi mannina gadigeyalli tumbiittukondiddene bekenisidagalle oduve kushipaduve d,ravi varma hospet

  6. raju hegade

    ಅಡ್ಡಿಲ್ರಿ!

  7. Vithal Dalawai

    IVU HANIGALALLA. BELAKINA MINCHU GONCHALUGALU!

  8. ladaibasu

    pratikriyisida ellarigoo vandanegalu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading