ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಹದ ಕೆಡಿಸಬೇಡ ಇನ್ನೇನು ಮೊಳಕೆ ಒಡೆಯುವುದೇ…’ ಎಚ್ ಸಿ ಭವ್ಯ ಕವನ

ಭ್ರೂಣ ಬೀಜ ಮಂಥನ

ಎಚ್ ಸಿ ಭವ್ಯ

ಹದ ಕೆಡಿಸಬೇಡ
ಇನ್ನೇನು ಮೊಳಕೆ ಒಡೆಯುವುದೇ
ಗರ್ಭ ಕತ್ತಲ ನೆಲದೊಳಗೆ
ಜೀವ ಮೊಳೆಯುವ ಸದ್ದು
ಶ್.. ನಿಶ್ಯಬ್ಧ
ಕ್ರಿಯೆ ಮುಂದುವರೆಯಲಿ
 
ಇನ್ನೂ ಸ್ಪಷ್ಟವಿಲ್ಲ
ಬೀಜದ ನಗು
ಇಗಾ..
ಬಿಡಿಸಿಕೊಳ್ಳುತ್ತಿದೆ
ಕೈ ರೆಂಬೆಗಳು, ಎದೆ ಕಾಂಡ
ಇನ್ನೇನು ಚಿಗುರುತ್ತವೆ,
ಕಂಡಾ..
ಈ ನೆಲ ಬಂಜೆಯಲ್ಲ

ಇರಲಿ, ಇರಲಿ ಹೊದಿಕೆ
ಆತುರವಿಲ್ಲ
ಯೋನಿಯಾ.. ಶಿಶ್ನವಾ..
ಕ್ರೂರ ಕುತೂಹಲಗಳ ತಣಿಸಬೇಕಿಲ್ಲ ನೆಲ
ಕನಸುಗಳ ಶವಾಗಾರ
ಭರ್ತಿಯಾಗಿದೆ
ಜರೂರು ಹುಟ್ಟಲೇಬೇಕಿನ್ನು ಅವು
 
ಮತ್ತೆ ಬಂದನಾ ವಸಂತ
ತಾಯಿ ಭ್ರೂಣಗಳ ತಂದನಾ
ಛೇ.. ಅಮ್ಮ ಉಳಿವುದೇ ಇಲ್ಲ
ಗಾಜಿನ ಪರದೆಗಳ ಹಿಂದೆ
 
ವಸಂತನ ಆ ಭ್ರೂಣಗಳೆಲ್ಲ
ಬರಲಿ ನನ್ನ ಹೊಕ್ಕಳಿಗೆ
ಹೊದಿಕೆ ಇಣುಕುವುದಿಲ್ಲ
ಒಡಲ ನೆಲದೊಳಗೆ ಜೋಪಾನ ಎಳೇ ಬೇರುಗಳು
ಮತ್ತೇನು ಮೊಳಕೆ ಒಡೆಯುವುದೇ
 
 
 

‍ಲೇಖಕರು G

7 March, 2014

4 Comments

  1. Venkatesha G

    ಕವಿತೆ ಚೆನ್ನಾಗಿದೆ. ಹದವರಿತ ಪದಪ್ರಯೋಗ. ಇನ್ನು ಹೆಚ್ಚಿನದನ್ನು ನಿರೀಕ್ಷಿಸುತ್ತೇವೆ.

  2. Raghunandan K

    ಇಷ್ಟವಾಯಿತು

  3. mmshaik

    tumba uttam kavite..!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading