ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಣ್ಣ ಕದಿಯುತ ಬಂದೆ ನನ್ನ ಮನಸನೂ ಕದ್ದೆ..

ಮೊದಲ ಪಾಪ

ಧನಂಜಯ ಕುಂಬ್ಳೆ

ಅಂದು ಗಂಗಾತೀರದಲಿ
ಮರಳ ರಾಶಿಯಲಿ ಜನಿಸಿದ ನೆನಪಿದೆಯೇ ಗೆಳತಿ
ನಾನು ಆದಾಮ, ನೀ ನನ್ನ ಸಂಗಾತಿ
ನಮ್ಮೊಳಗೆ ಬೆಳೆದು ಬಂದಿತ್ತಲ್ಲ ಪ್ರೀತಿ

ಸಾಗರದ ನೊರೆಹಾಲ ಹಿಂದಟ್ಟಿ ಬೆಳೆದೆ
ವನಸುಮಗಳೆಡೆಯ ಕನಸುಗಳ ಜತೆಗೆ
ಹಣ್ಣ ಕದಿಯುತ ಬಂದೆ ನನ್ನ ಮನಸನೂ ಕದ್ದೆ
ಒಂದಿನಿತೂ ಅರಿವಿರಲಿಲ್ಲ ನಮಗೆ

ಹಣ್ಣು ಸವಿಯುತ್ತ, ತುಟಿ ತುಟಿಯ ಬಳಸುತ್ತ
ನೋಡಿದೆವು ಕೆಳಗೆ ಲಜ್ಜೆಯಿಂದ
ಕೆಳಗೆಲ್ಲ ಬಂತು ಸನಿಹದಲಿ ನಾನಿದ್ದೆ
ಮತ್ತೆ ಎಚ್ಚರಗೊಂಡೆ ಮಗಳ ಗೆಜ್ಜೆಯಿಂದ

ಗಂಗೆ ಕರೆಯುತಲಿತ್ತು, ಮಗು ಇಲ್ಲಿ ಅಳುತ್ತಿತ್ತು
ಮನೆಯ ಸುತ್ತಿನ ಹಣ್ಣು ಖಾಲಿ ಖಾಲಿ
ಮಾತು ಬಾರದ ಜೀವಿ ಹೊಟ್ಟೆ ಹೊರೆಯುತಲಿತ್ತು
ಬೆತ್ತ ಎತ್ತಿದೆ ನಾನು ಕೆಳಗಿಳಿಸಲಿಲ್ಲ ಮತ್ತೆ

ಕೋಟಿ ಹಾವುಗಳಿಲ್ಲಿ ಹಣ್ಣ ಕುಸುಮದ ಸುತ್ತ
ವಿವೇಕಕ್ಕಿನ್ನು ಜಾಗವೆಲ್ಲಿ?
ನೀ ತರಿಸಿ ನಾ ಬಡಿದ ಜಂತುಗಳ ವಿಷವೆಲ್ಲ
ನಿನ್ನ ಬಸಿರಿಗೇ ಬಿತ್ತೇ ಇನ್ನು ಗತಿಯೆಲ್ಲಿ?

ಅವ್ವಾ… ಬಾಲ್ಯದ ಗೆಳತಿ
ನನ್ನ ನೆನಪಿನ ದಿನಗಳ
ಸುಂದರ ಕನಸು ನೀನು
ಲೋಕದ ಪುಣ್ಯದ ಪ್ರಥಮ ಹೆಣ್ಣು
ಮಕ್ಕಳಿಗೆ ಹೇಳು ಎಲ್ಲಿದೆ
ಅಂದು ನೀ ಸವಿದವಿವೇಕ ಹಣ್ಣು?

 

‍ಲೇಖಕರು Admin

21 January, 2016

2 Comments

  1. smitha

    Olledide kavithe Mestre. –smitha.

  2. sangeetha raviraj

    ಚೆನ್ನಾಗಿದೆ ಕವಿತೆ ಸರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading