ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಗಲು ಲಯದಲಿ, ರಾತ್ರಿ ಸೃಷ್ಠಿಗೆ….. ರೇಖಾ ಕವನ

ನಿನ್ನೆ ಎ೦ ಎಸ್ ಮೂರ್ತಿಯವರ ರೇಖಾ ಚಿತ್ರ ಪ್ರಕಟಿಸಿ ಅದಕ್ಕೆ ಸ೦ವಾದಿಯಾಗಿ ಬೇ೦ದ್ರೆಯವರ ಕವನದ ಸಾಲುಗಳನ್ನು ಪ್ರಕಟಿಸಿದ್ದೆವು. ಅದನ್ನು ನೋಡಿದ ರವಿ ಮೂರ್ನಾಡು ಕ್ಯಾಮೆರೂನ್ ನಿ೦ದ ಒ೦ದು ಕವನ ಕಳುಹಿಸಿದ್ದಾರೆ.  ಆ ಚಿತ್ರ ಮತ್ತು ಕವನ ಇಲ್ಲಿದೆ.

ಯಾರೂ ಕರೆದರೋ, ಎನ್ನ ತೆರೆದರೋ

ಬೆರಳ ರೇಖೆಗೆ ತಬ್ಬಿ

ಉಸಿರ ಗಾಳಿಗೆ ಬಿಸಿಯ ಸುರಿಯುತಾ

ಬೆಟ್ಟ ಸ್ಪರ್ಶ ಉಬ್ಬಿ

 

ಲಜ್ಜೆ ಮರೆತಿದೆ,ರಾಗ ಮೌನಕೆ

ಭಾನು ಭೂಮಿಗೆ ಬಗ್ಗಿ

ಜಲವ ತೆರೆಯುತಾ ತೊರೆಯ ಉಕ್ಕಿಸಿ

ನೊರೆಯ ಜಳಕಕೆ ಹಿಗ್ಗಿ

 

ಹಸಿರ ಹಸಿವಿಗೆ ನೆರೆದ ಮೈಯಿದು

ಹಕ್ಕಿ ಊಟಕೆ ಹಣ್ಣು

ಹಗಲು ಲಯದಲಿ, ರಾತ್ರಿ ಸೃಷ್ಠಿಗೆ

ಮುಚ್ಚಿ ತೆರೆದಿದೆ ಕಣ್ಣು.

 

]]>

‍ಲೇಖಕರು G

18 June, 2012

4 Comments

  1. D.RAVI VARMA

    ಹಸಿರ ಹಸಿವಿಗೆ ನೆರೆದ ಮೈಯಿದು
    ಹಕ್ಕಿ ಊಟಕೆ ಹಣ್ಣು
    ಹಗಲು ಲಯದಲಿ, ರಾತ್ರಿ ಸೃಷ್ಠಿಗೆ
    ಮುಚ್ಚಿ ತೆರೆದಿದೆ ಕಣ್ಣು.
    ತುಂಬಾನೇ ಅರ್ಥಪೂರ್ಣವಾಗಿದೆ. ಒಂದು ಸುಂದರ ಚಿತ್ರ, ಕಲಾಕೃತಿ, ನಿಸರ್ಗ , ಇವೆಲ್ಲವೂ ಕಾವ್ಯಕ್ಕೆ ಅದೆಸ್ತು ಪ್ರೆರನೆಯಾಗಬಲ್ಲವು ,ಅಲ್ಲವೇ,., ಕಾಳಿದಾಸನ ಕಾವ್ಯವಂತು ಈನಿಟ್ಟಿನಲ್ಲಿ ಹೆಣ್ಣಿನ ಸೌಂದರ್ಯದ ಶ್ರುಂಗಾರ ರಸವನ್ನು ಉತ್ತುಂಗಕ್ಕೆ ಹೊಯ್ದಿದೆ. ಬೇಲೂರು,ಹಳೆಬೀಡಿನ, ಶಿಲಾ ಬಾಲಿಕೆಯರು , ಅಜಂತಾ ,ಎಲ್ಲೋರದ, ಕೆತ್ತನೆಗಳು, ಅದೆಸ್ತು ಕಾವ್ಯದ ಹುಟ್ಟಿಗೆ ಕಾರಣವಾಗಿಲ್ಲ. ಅದೆಸ್ತು ಕವಿಗಳ ಮನ ಕಾಡಿಲ್ಲ. ಇಲ್ಲಿ ಮೂರ್ತಿ ಅವರಶ್ರುಂಗಾರ ಚಿತ್ರ , ರವಿಮುರ್ನಾಡ್,ಕಾವ್ಯಕ್ಕೆ ಪ್ರೇರಣೆಯಾದದ್ದು, ನಿಜಕ್ಕೂ ನನಗೆ ಕುಶಿ ತಂದಿದೆ,
    ರವಿ ವರ್ಮ ಹೊಸಪೇಟೆ

  2. shanthi k.a.

    superb…..

  3. savitri

    Nice poem Sir.:-)

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading