ಹೆಜ್ಜೆಗಳ ಸಾಲು
ವನಿತಾ ಪಿ
“ನೆನಪಿನ ಸುರುಳಿಯಲ್ಲಿ
ಅನಂತ ಭಾವಗಳ
ಒಕ್ಕೊರಲು
ಕಡಲ ತಡಿಗೆ ಇಳಿದರೆ.
ಹಂಗಿರದ ಆಕಾಶನೀಲಿ
ಹಂಬಲಿಸುವ ಹಗಲ ಕಡಲು.
ಅಲೆ ಉಬ್ಬರದ ತಡಿಯಲ್ಲಿ
ಮರೆತು ಕುಳಿತಾಗೊಮ್ಮೆ
ದಡದ ಮರಳು ಇಳಿದು
ಕಡಲ ತೆರೆಯ ಉಕ್ಕಿಗೆ
ಕಡಲು ಒಡಲು
ಅಭೇದದ ದಡ.

Seamless abstract hand-drawn pattern, waves background. Vector illustration
ಆ ಮೋಡಕ್ಕೂ ಒಮ್ಮೆ
ಭ್ರಾಂತು ಹಿಡಿದಂತೆ
ಕಡಲ ಎದೆಗೆ
ಮಳೆಗರೆಯುತ್ತದೆ..!
ಒಳಗಡಲ ಹರವು
ಮನದ ಚಿಪ್ಪಗೆ ಇಳಿವ
ಕಸುವು.
ಕಡಲ ಪ್ರೀತಿಸಲಾದೀತೆ?
ಎಷ್ಟೋ ಹೆಜ್ಜೆಗಳ ಸಾಲು
ಮಳಲ ದಂಡೆಯಲಿ
ಬಿಟ್ಟು ಬಂದ
ವಿರಹಿಗಳು..”






0 Comments