ಸಾವಿನ ಕುರಿತ ಕವನಗಳಿಗೆ ಮಾರುಹೋಗಿದ್ದವನು!
-ಸುನಂದಾ ಪ್ರಕಾಶ ಕಡಮೆ
ಕಲ್ಕತ್ತೆಯಲ್ಲಿ ನಡೆದ-ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳ ವಿಮೋಚನೆಯ ಮುಕ್ತಿದಶಕ ಎಂದೇ ಹೆಸರಾದ ಚಳುವಳಿಯಲ್ಲಿ ತೊಡಗಿಕೊಂಡು 1084 ನೆ ನಂಬರಿನ ಶವವಾಗಿ ಹೋದ ‘ಬ್ರತಿ’ ಹುಟ್ಟುವಾಗ ತಾಯಿ ಸುಜಾತಾ ಒಬ್ಬಳೇ ಆಸ್ಪತ್ರೆಗೆ ಹೋಗಿ ಏಕಾಂಗಿಯಾಗಿ ಹಡೆದು , ಹಸುಗೂಸನ್ನೆತ್ತಿಕೊಂಡು ಮನೆಗೆ ಬಂದಿರುತ್ತಾಳೆ .
ಮೊದಲ ಮೂರು ಮಕ್ಕಳು ಜನಿಸುವಾಗ ಇದ್ದ ಅವಳ ಅತ್ತೆ ಅದೇ ವೇಳೆಗೆ ಉದ್ದೇಶಪೂರ್ವಕ ಊರಿಗೆ ಹೋಗಿದ್ದಾಳೆ .
ಈ ಭೂಮಿಗೆ ಶಿಶುಗಳನ್ನು ತರುವ ತನ್ನ ಗುರುತರ ಕಾರ್ಯದಲ್ಲಿ ಪ್ರೀತಿ-ವಿಶ್ವಾಸಗಳೇ ಇಲ್ಲದ ಈ ಪರಿಸರಕ್ಕೆ ಮುಗ್ಧ ಮಕ್ಕಳು ಬಂದ ಬೀಳುವ ಬಗ್ಗೆ ಸುಜಾತಾಗೆ ಅಂದಿನಿಂದ ಆತಂಕ ಹುಟ್ಟಲು ಪ್ರಾರಂಭ .
ಬ್ರತಿ ಅತಿ ಚಿಕ್ಕವನಿರುವಾಗಲೇ ತಂದೆ ದಿವ್ಯನಾಥ ಚಟರ್ಜಿಯ ಆದೇಶದಂತೆ ತಾಯಿಯಿಂದ ಬೇರೆಯಾಗಿ ಏಕಾಂಗಿಯಾಗಿ ಮಲಗಲು ಅತಿಕಷ್ಟದಿಂದ ರೂಢಿಸಿ ಕೊಳ್ಳುತ್ತಾನೆ ಆಗ ಸುಜಾತಾಳ ಚಡಪಡಿಕೆ ಕಠಿಣ ಮನಸ್ಸುಳ್ಳ ದಿವ್ಯನಾಥನ ಒಳಗಣ್ಣಿಗೆ ಬೀಳುವುದಿಲ್ಲ ಬ್ರತಿಗೆ ಆಶ್ಚರ್ಯ .
ಅಣ್ಣ ಮತ್ತು ಇಬ್ಬರು ಅಕ್ಕಂದಿರು ಅಪ್ಪನ ಕ್ಲೀಷೆ ಎನ್ನಿಸುವ ಶಿಸ್ತಿಗೆ ಹೊಂದಿಕೊಂಡು ಮುಖದಲ್ಲಿ ಅನವಶ್ಯಕ ಗಾಂಭೀರ್ಯ ಮತ್ತು ವೇಷ ಭೂಷಣ ಗಳಲ್ಲಿ ಸಾಮ್ಯ ಕಾಯ್ದುಕೊಂಡು ಸ್ವಂತದ ವ್ಯಕ್ತಿತ್ವ ವನ್ನೇ ಕಳಕೊಂಡವರಂತಿರುತ್ತಾರೆ . ಆಗೆಲ್ಲ ಬ್ರತಿ ಒಂಟಿಯಾಗಿ ತನ್ನ ಕೋಣೆಯ ಕಿಟಕಿಯ ಹೊರ ನೋಡುತ್ತಾ ಸಾವಿನ ಬಗ್ಗೆ ಬರೆದ ಕವನಗಳನ್ನು ರೋಮಾಂಚನದಿಂದ ಓದುತ್ತಿರುತ್ತಾನೆ . ತಂದೆ ದಿವ್ಯನಾಥನೆಂದರೆ ಅವನಿಗೆ ಎಲ್ಲಿಲ್ಲದ ಭಯ . ತಂದೆಯ ಹಿಂದೆ ಆಟ ಅವನನ್ನು ‘ಬಾಸ್’ ಎಂದೇ ಸಂಬೋಧಿಸುವುದು.
ದಿವ್ಯನಾಥ ತನ್ನ ಟೈಪಿಸ್ಟಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಸುಜಾತಾ ಮೌನವಾಗಿರಬೇಕು . ಅಂಥ ಭಿನ್ನಾಭಿಪ್ರಾಯದಲ್ಲೂ ದಿವ್ಯನಾಥ ಹೆಂಡತಿಯ ಪಕ್ಕದಲ್ಲೇ ಮಲಗಬೇಕು . ಆತನಿಗೆ ಆರ್ಥಿಕ ಮುಗ್ಗಟ್ಟು ಎದುರಾದಾಗ ಹೆಂಡತಿಯನ್ನು ಒಂದು ಬ್ಯಾಂಕಿನಲ್ಲಿ ನೌಕರಿ ಹಿಡಿಯಲು ಪ್ರೇರೇಪಿಸಿ , ಹಣದ ಅಗತ್ಯ ತೀರಿದ ನಂತರ ಕೆಲಸ ಬಿಡಲು ಒತ್ತಾಯಿಸುತ್ತಾನೆ .
ಸುಜಾತಾ ಕೆಲಸದಿಂದ ಸಿಗುವ ನೆಮ್ಮದಿಗಾಗಿ ಅವನ ಮಾತಿಗೆ ಒಪ್ಪುವುದಿಲ್ಲ. ಆಗಿನಿಂದ ವೈಮನಸ್ಯ ಶುರು . ‘ಬ್ರತಿ’ ಯುವಕನಾಗುತ್ತಾನೆ ತಾಯಿಯ ದಿನದ ಒಂದು ಇಷ್ಟವಾದ ಕೆಲಸವೆಂದರೆ ತನ್ನ ಕಿರಿಮಗನೊಂದಿಗೆ ಬಿಡುವು ಮಾಡಿಕೊಂಡು ಹರಟುವುದು . ‘ಬ್ರತಿ’ ತನ್ನ ತಾಯಿಯಂತೆಯೇ ಕುಟುಂಬದ ಆಪ್ತ
ಸಂವಾದಕ್ಕೆ ಮಿಡಿಯುವ , ಯಾರನ್ನಾದರು ಪ್ರೀತಿಸಬೇಕು, ಗೌರವಿಸಬೇಕು ಮತ್ತು ಎಲ್ಲರ ಪ್ರೀತಿಗೆ ತಾನು ಒಳಗಾಗಬೇಕು ಎಂಬ ನಿರಂತರ ಹಂಬಲದವನು .
ಆಗಾಗ ಹೊಟ್ಟೆನೋವಿನಿಂದ ನರಳುವ ತಾಯಿಗೆ ದೊಡ್ಡಮಕ್ಕಳು ಕಣ್ಣಲ್ಲಿ ಕಣ್ಣಿಟ್ಟು ಸಹ ನೋಡದೆ ಕರ್ತವ್ಯ ವೆಂಬಂತೆ ಲಿಂಬು ಶರಬತ್ತು ಮಾಡಿಕೊಡುತ್ತಾರೆ . ಸಣ್ಣ ಮಗ ಬ್ರತಿ ಮಾತ್ರ ತನ್ನ ಶರ್ಟಿನ ಗುಂಡಿ ರಿಪೇರಿ ಮಾದಿಲ್ಲವೆಂದೋ , ಬೆಳಗ್ಗೆಯ ಚಳಿಗೆ ಅಮ್ಮ ಬೆಚ್ಹನೆ ಶಾಲು ಹೊದ್ದುಕೊಂಡಿಲ್ಲವೆಂದೋ ರೇಗುವುದು ಸುಜಾತಾಗೆ ಹಿತವಾಗಿರುತ್ತದೆ . ಮನೆ ಮಂದಿಯಿಂದ ಕೆಲಸಕ್ಕೆ ಬಾರದವನೆಂದು ಹಣೆ ಪಟ್ಟಿ ಹೊತ್ತ , ಅಮ್ಮನ ಮೊದ್ದು ಮಗನೆಂದೇ ಹಿಯಾಳಿಸಲ್ಪಡುವ ‘ಬ್ರತಿ’ ಏನು ಮಾಡುತ್ತಿದ್ದೇನೆಂದೆ ಯಾರಿಗೂ ತಿಳಿಸದೇ ತನ್ನೆಲ್ಲ ಶೌರ್ಯ , ಧೈರ್ಯಗಳನ್ನು ಸಾವಿನಲ್ಲಿ ತೋರಿಸಿಬಿಡುತ್ತಾನೆ .
ಬಾಂಗ್ಲಾದೇಶ ಕ್ಕೆ ಸಹಾನುಭೂತಿ ಹಾಗು ಬೆಂಬಲ ಸೂಚಿಸುವ ನೆಪದಲ್ಲಿ ಪಶ್ಹಿಮ ಬಂಗಾಳವನ್ನು ಅಲ್ಲೋಲ ಕಲ್ಲೋಲ ಮಾಡಿದ ಬರ್ಬರತೆ – ಕೌರ್ಯಗಳ ಚಿತ್ರಗಳು ಕಣ್ಣಿಗೆ ಕಟ್ಟಿ ನಿಲ್ಲುತ್ತವೆ . ನಿರ್ದಯವಾದ ರಾಜಕೀಯ ವರ್ತನೆಗಳಲ್ಲಿ ಪ್ರತಿಭಟನೆಗಳನ್ನೋಡ್ಡುವ ಸಾರ್ವಜನಿಕ ಚಳುವಳಿಗಳು , ನಡೆದು ಹೋಗುವ ಹತ್ಯಾ ಕಾಂಡಗಳು ಹೊರ ಕಣ್ಣುಗಳಿಗೆ ಕಾಣದೆ ಉಳಿದು ಹೋಗುವುದು ತೀರಾ ಅಮಾನವೀಯವೆನಿಸುತ್ತದೆ . ಇಂಥ ಹತ್ಯೆಗೆ ಹೆಚ್ಹಾಗಿ ಬಲಿಯಾಗುವವರೂ ‘ಬತ್ರಿ’ ಯಂಥ ತರುಣರು .
ತನ್ನ ಮುದ್ದು ಮಗನ ಮುಖವನ್ನು ಕಣ್ತುಂಬ ನೋಡಿ ಹಣೆಗೊಂದು ಮುತ್ತು ಕೊಟ್ಟು ಹಿಂತಿರುಗಬೇಕೆಂದಿರುವ ಸುಜಾತ , ಮುಖವೇ ಇಲ್ಲದಂತೆ ಬರ್ಬರವಾಗಿ ಹತ್ಯೆಗೀಡಾದ ಮಗನ ಬೆರಳು, ನೀಲಿ ಶರ್ಟು , ತಲೆಗೂದಲನ್ನು ನೋಡಿ ಗುರ್ತಿಸಬೇಕಾದ ಪರಿಸ್ಥಿತಿ .
ಕೊಂಚ ಅಶಿಸ್ತು ರೂಢಿಸಿಕೊಂಡಿದ್ದರು ಮಾನವೀಯ ಸಂಬಂಧಗಳ ಕೊಂಡಿಯಂತಿರುವ ಮಗ ಬತ್ರಿ ನಿಸ್ವಾರ್ಥ ಸಾವು ಪಡೆದಿದ್ದು ತಾಯಿಯ ಮನಸ್ಸಿಗೆ ಒಂದು ಕ್ಷಣ ಹೆಮ್ಮೆಯಾಗಿ ಕಂಡರೂ , ತಂದೆ ಆಗಲೇ ಮಗನನ್ನು ದ್ರೋಹಿ ಎಂಬಂತೆ ಕಡೆಗಣಿಸಿದ್ದು ಸಹಿಸಲ ಸಾಧ್ಯವಾಗಿರುತ್ತದೆ .
ಮಗ ಸತ್ತು ಹೋದ ಮರುದಿನ ವೃತ್ತ ಪತ್ರಿಕೆಗಳಲ್ಲಿ ಎಲ್ಲಿಯೂ ಬತ್ರಿಯ ಹೆಸರು ಅಚ್ಹಾಗದಂತೆ ನೋಡಿಕೊಳ್ಳುವಲ್ಲಿ ತನ್ನ ಪ್ರಭಾವ ಬಳಸಿ ದಿವ್ಯನಾಥ ಯಶಸ್ವಿಯಾಗಿರುತ್ತಾನೆ . ಮಗ ಸತ್ತದ್ದಕ್ಕು ಎಲ್ಲಿಯೂ ಸಾಕ್ಷಿ ಉಳಿಸಿರುವುದಿಲ್ಲ .
ಮಗನ ಶವವನ್ನು ನೋಡಲು ಹೋಗುವುದಾಗಿ ಹಠ ಮಾಡುತ್ತಿದ್ದ ಸುಜಾತಾಗೆ ತನ್ನ ಕಾರನ್ನು ಬಳಸ ಕೂಡದೆಂದು ಆಜ್ಞಾಪಿಸುತ್ತಾನೆ . ಇಂಥದೊಂದು ವಿವಾದಾತ್ಮಕ ಸಾವಿಗೆ ಮಗ ತುತ್ತಾದನೆಂದು ಹೇಳಿಕೊಳ್ಳುವುದು ಅವನಿಗೆ ನಾಚಿಕೆಯ ಹಾಗು ಸ್ವಪ್ರತಿಷ್ಟೆಗೆ ಅಡ್ಡಿಯಾಗುವ ವಿಷಯವಾಗಿರುತ್ತದೆ . ಆತ ಸಭ್ಯ ಗೃಹಸ್ಥ ಹಾಗು ಸಜ್ಜನ ನಾಗರಿಕನೆಂಬ ವರ್ತುಲದಲ್ಲಿ ಬಂಧಿಯಾದವನಂತೆ ವರ್ತಿಸುತ್ತಾನೆ .
ನಂತರ ಮನೆಯಲ್ಲಿ ಬತ್ರಿಯ ನೆನಪು ಹುಟ್ಟಿಸುವ ಅವನ ಶೂಗಳು ಮತ್ತು ರೇನ್ ಕೋಟನ್ನು ನಾಶಮಾಡಿ ಅವನ ಇರವಿನ ಕುರುಹನ್ನೇ ಅಳಿಸಿ ಹಾಕಲು ಪ್ರಯತ್ನಿಸುವುದು ಸುಜಾತಾಗೆ ಇನ್ನಷ್ಟು ವೇದನೆಯನ್ನು ತರುತ್ತದೆ .
ಸಭ್ಯರೆಂಬುವರ ಜಗತ್ತಿನ ಸೋಗು , ವಿಕಾರ , ಪೊಳ್ಳುತನ ಮತ್ತು ಅಮಾನವೀಯ ಮುಖಗಳನ್ನು ಹೇಳುವ ಈ ಕಥೆಯಲ್ಲಿ , ನಮ್ಮ ದಾರಿಯುದ್ದಕ್ಕೂ ಜೊತೆಯಾಗಿರುವವರು ಬತ್ರಿ ಮತ್ತು ಆತನ ತಾಯಿ
(ಇದು”ಹಜಾರ್ ಚೌರಾಸಿ ಕೀ ಮಾ’ನ ಕಥೆ)
Like this:
Like Loading...
Related
Batriya kathe manamidiyuvanthide. Thandeyenisikonda divyanatha ashtu nirdayavaagi rakshasananthe varthisabaaradithu. Adre thaayi sujata patra chennage moodibandide. Sunanda uthama kathe kottiddaare.
ಅವಧಿ,
ಇದು”ಹಜಾರ್ ಚೌರಾಸಿ ಕೀ ಮಾ’ನ ಕಥೆ ಅಂತ ಸಾಮಾನ್ಯ ಓದುಗರಿಗೂ ಗೊತ್ತಾಗುವ ಹಾಗೆ ಒಂದು ಟಿಪ್ಪಣಿ ಹಾಕಿರಲ್ಲ!! ಸುನಂದಾ ಅವ್ರೆ, ಕಥೆಯನ್ನ ಬಹಳ ಚೆನ್ನಾಗಿ ನಿರೂಪಿಸಿದೀರಿ. ಧನ್ಯವಾದಗಳು.
ಟೀನಾ.
done
🙂
kathe thmba chennagidhe.’hazar chourasi ka ma’ chithra nanu nodiddene.