ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ಯಾನಿಟೈಜ್ ಆಗಬೇಕಾಗಿದೆ ಹೃದಯ

ರಾಘವೇಂದ್ರ ದೇಶಪಾಂಡೆ

ವಯಸ್ಸೊಂದಿತ್ತು ಆ ದಿನಗಳಲ್ಲಿ
ಜಾದೂವಿನಲ್ಲು ನಂಬಿಕೆಯಿತ್ತು…
ವಯಸ್ಸೊಂದಿದೆ ಇವಾಗ
ವಾಸ್ತವತೆಯಲ್ಲು ಸಂಶಯವಿದೆ…

ಅಂದಕೊಂಡಿರುವದು ಸುಳ್ಳು..
ನಿಯತ್ತು ನನ್ನಲ್ಲಿ ಇಲ್ಲವೆನ್ನುವುದು
ನಿಜವಾಗಿರುವದು…
ನಾನೊಬ್ಬ ಅಭಿನಯ ನಟನಲ್ಲ ಎನ್ನುವದು

ರೂಢಿಸಿಕೊಂಡಿರುವೆ ನಾ
ಜೇಬಿನಲ್ಲಿ ಪೆನ್‌ ಇಟ್ಟುಕೊಳ್ಳಲು
ಯಾವತ್ತಾದರೂ ಯಾರೋ ಕೇಳಬಹುದು
ನಾವು ನಿಮ್ಮವರು…!
ಒಂದು ಆಟೋಗ್ರಾಫ್ ಸಿಗಬಹುದೆಂದು

ಮಾಡಿಕೊಳ್ಳಬೇಕಾಗಿದೆ
ಕೆಲವೊಮ್ಮೆ ಹೃದಯವನು ಸ್ಯಾನಿಟೈಜ್
ಏಕೆಂದರೆ…
ದ್ವೇಷವೆಂಬ ವೈರಸ್ ಹುಟ್ಟುವದೇ
ಹೃದಯದಿಂದಲ್ಲವೇ

‍ಲೇಖಕರು Avadhi

19 September, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading