ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ಮಿತಾ ಶೆಣೈ ಹೊಸ ಕವಿತೆ- ಪಾರಿವಾಳಗಳೇ

ಸ್ಮಿತಾ ಶೆಣೈ

ಹಳೇ ಮನೆಗಳ ಹೆಂಚಿನಡಿ
ಬದುಕು ಕಟ್ಟಿಕೊಳ್ಳುವ
ಪಾರಿವಾಳಗಳೇ
ನೀವಿನ್ನು ನಮ್ಮನ್ನು
ನಂಬುವುದೇ ಇಲ್ಲವೇ
ಅಂಗೈಯಲ್ಲಿ ಕಾಳಿಟ್ಟರೆ
ತಿನ್ನಲು ಬರುವುದಿಲ್ಲವೇ

ನಮ್ಮ ಎತ್ತರದ ಕಟ್ಟಡದ
ಕಿಟಕಿ ಕಟ್ಟೆ ಯ ಮೇಲೆ
ಗೂಡು ಮಾಡುವುದಿಲ್ಲವೇ

ಹೊರಹೊರಗೇ ಇರುತ್ತಿರಿ
ಮನೆಒಳಗೆ ಗರಿಹಾಕಿ
ಮಕ್ಕಳನು ಬೆರಗು ಗೊಳಿಸುವುದಿಲ್ಲವೇ

ಎಲ್ಲ ಸೇರಿ ಎಕ್ದೊತೀನ್ ಎಂದು
ಒಮ್ಮೆ ಲೇ ಹಾರಿ ದೂರಹೋಗಿ
ಸಮತೋಲನದಲ್ಲಿ
ಬಂದು ಕೂತಲ್ಲಿಯೇ ಕೂರುವುದಿಲ್ಲವೇ

ನಮ್ಮಲ್ಲಿ ಅಪನಂಬಿಕೆಯೇ
ಎಲೆ ಕಚ್ಚಿ ಕುಳಿತ ನಿಮ್ಮ
ಚಿತ್ರದಡಿ ಶಾಂತಿದೂತರೆಂದು
ಬರೆದಿದ್ದಾರೆ ಪುಸ್ತಕಗಳಲ್ಲಿ
ಅದಕ್ಕಾದರೂ ನಮ್ಮ ಬಾಲ್ಕನಿಗೆ ಬನ್ನಿ

ಗುಗುಗೂ ಉಮ್ಮಳದ ಕನವರಿಕೆ ಹಾಡು ಹಾಡಿ
ಪಟಪಟ ರೆಕ್ಕೆಯ
ಚಟುವಟಿಕೆ ತೋರಿ
ಗೂಡು ಕಟ್ಟಿ ಮರಿಮಾಡಿ
ಟಿವಿ ಬಿಟ್ಟು ನಿಮ್ಮನ್ನು ನೊಡಲಿ
ಮಕ್ಕಳು
ಅವರಿಗಿಷ್ಟು ಪ್ರೀತಿಸಲು ಬಿಡಿ
ಶಾಂತಿದೂತರೇ ನಾವು ಬಿಟ್ಟೆವೆಂದು ನೀವು ಬಿಡಬೇಡಿ
ನಮ್ಮ ಮನೆ ಬಣಬಣ ವಾಗದಿರಲಿ

‍ಲೇಖಕರು Avadhi

25 March, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading