ಖಲೀಲ್ ಜಿಬ್ರಾನ್
ಅನು: ಚಿದಂಬರ ನರೇಂದ್ರ.
ದೇವಸ್ಥಾನದ ನೆರಳಲ್ಲಿ
ಒಬ್ಬಂಟಿಯಾಗಿ ಕುಳಿತಿದ್ದ ಕುರುಡನೊಬ್ಬ
ನಮ್ಮ ಕಣ್ಣಿಗೆ ಬಿದ್ದ.
‘ಅಗೋ ಅಲ್ಲಿ ನೋಡು
ಈ ನೆಲದ ಅತ್ಯಂತ ದೊಡ್ಡ ಜ್ಞಾನಿಯನ್ನು’
ಗೆಳೆಯ ಉತ್ಸಾಹದಿಂದ ಕೂಗಿಕೊಂಡ.

ಗೆಳೆಯನನ್ನು ಹಿಂದೆ ಬಿಟ್ಟು
ನಾನು ಕುರುಡನ ಹತ್ತಿರ ಹೋದೆ,
ಬಹಳ ಹೊತ್ತು ನಾವು ಅದು, ಇದು ಮಾತನಾಡಿದೆವು.
‘ಯಾವತ್ತಿನಿಂದ ನಿನಗೆ ಈ ಕುರುಡು? ‘ ನನ್ನ ಪ್ರಶ್ನೆ.
‘ನಾನು ಹುಟ್ಟು ಕುರುಡ ಸ್ವಾಮಿ’ ಅವ ಉತ್ತರಿಸಿದ.
‘ಎಷ್ಟು ಮೋಹಕವಾಗಿದೆ ನಿನ್ನ ಮಾತು
ಯಾವ ಜ್ಞಾನದ ಮಾರ್ಗ ನಿನ್ನದು?’ ಮತ್ತೆ ಕೇಳಿದೆ.
‘ ನಾನೊಬ್ಬ ಖಗೋಳ ಯಾತ್ರಿ’
ಆತ, ತನ್ನ ಕೈ ಎದೆ ಮೇಲೆ ಇಟ್ಟುಕೊಂಡು ಹೇಳಿದ,
‘ಹೀಗೆ ನಾನು
ಹಲವಾರು ಸೂರ್ಯ, ಚಂದ್ರ, ನಕ್ಷತ್ರಗಳ ಜೊತೆ ಹೆಜ್ಜೆ ಹಾಕುತ್ತೇನೆ’






stephen nenapalli anuvada..chennagide
Tumba chennagide. Thank you. I no more see sharing/ posting option (on twitter / FB). hope i am not hurting anycone or vilating any copyrights if I copy and paste the link directly,