ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೋತು ಕಿರುಗಾಳಿಯಾಗಿ ನಿನ್ನ ಪರಿಮಳವ ಹೊತ್ತೊಯ್ಯಲೇನು

ಕರಳುಬಳ್ಳಿಯಡಿ ಅರಳಿದ ಹೂವು

ಹಾರೀತ

ಚಿಕ್ಕಪ್ಪನ ಮನೆಯಮುಂದೆ ಆಡಿಕೊಂಡಿದ್ದ ಹುಡುಗನ
ತಮ್ಮಾ ಎಂದು ಕರೆದುಬಿಡಲೇ….
ಎಂದೋ ನೋಡಿದ ನೆನಪು ಒತ್ತರಿಸಿ ಬರುತ್ತಿದೆ
ಚಡ್ಡಿಯೇರಿಸಿ ,ಸಿಂಬಳ ಸೀಟುವ ನಾನೇ ಎನಿಸಿಬಿಡುತ್ತದೆ

ಮನೆತೊರೆದು, ಸಂಬಂಧಗಳ ಹಂಗು ಹರಿದು
ಹೊಸ ಹೊಸ್ತಿಲ ಬಳಿ, ಎತ್ತಾಡಿಸಿದ ಚಿಕ್ಕಪ್ಪನ ನೆನಪು
ಉಪ್ಪಿನಕಾಯಂತಿದ್ದ ನೀನು ಎಲ್ಲಿಹೊದೆಯೋ ಗುರುವೇ
ಮನೆಗೆ ಬಂದು ಅಮ್ಮನ ಬಳಿ ಸುಳಿದಾಡಿದ ನಿನ್ನ ಸಜ್ಜನ ಲಂಪಟ ನಗು
ಅವಳ ಮೌನ,
ನನ್ನೆದೆಯಲ್ಲಿ ಇನ್ನೂ ನಿಂತಿದೆ
 
ಕರಳುಬಳ್ಳಿಯಡಿಯಲ್ಲಿ ಕಂಡೂಕಾಣದೆ ಅರಳಿ ನಿಂತ ಹೂವು ನಾನು
ಹೀಚು ಕಾಯಾಗಿ ಹಂಬಲದ ಟಿಸಿಲೊಡೆದು
ಬೆಂಬಲಕ್ಕೆ ಕಾತರಿಸಿದ ನೋಟಕ್ಕೆ ಹೆಗಲಾದವನು ನೀನು
 
ಲೌಕಿಕದ ಲೆಕ್ಕಾಚಾರಕ್ಕೆ ಬಡ್ಡಿ ಕಟ್ಟಲಾಗದೆ ಸೋತು ನಿಂತ ನಿನಗೆ
ಕೊಡುವುದೇನು ಕೊಂಬುದೇನು
ಜಗದ ವ್ಯೂಹಕ್ಕೆ ಅಭಿಮನ್ಯುವಾಗಿ,ಹುತಾತ್ಮನಾಗುವ ಹಟಕ್ಕೆ
ಸೋತು ಕಿರುಗಾಳಿಯಾಗಿ ನಿನ್ನ ಪರಿಮಳವ ಹೊತ್ತೊಯ್ಯಲೇನು
 

‍ಲೇಖಕರು G

29 November, 2014

1 Comment

  1. mmshaik

    good one…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading