ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಸೈಕಲ್ ಹತ್ತಿದವನ ಬೆನ್ನ ಹಿಂದಿನ ಸಪ್ಪೆದಾರದೊಳಗೆ…' – ಹೃದಯಶಿವ ಕವನ

ಪತ್ರಿಕೆ ತೂಕಕ್ಕೆ

ಹೃದಯ ಶಿವ

ಅಯ್ಯೋ, ಇವೆಲ್ಲ ಪ್ರತಿ ಬೆಳಗ್ಗೆ
ಜಗತ್ತನ್ನೇ
ಮನೆಯಂಗಳಕ್ಕೆ ತಂದಂಥವು.
ಖುದ್ದು ನಾನೇ
ರೊಕ್ಕ ಕೊಟ್ಟು ತರಿಸಿಕೊಂಡಂಥವು-
ನೆನ್ನೆಯಷ್ಟೇ ಬಿಲ್ಲು ಪಾವತಿಸಿದ್ದೆ,
ಮೊನ್ನೆಯಾಚೆಯ ನಾರದಿಕೆಗೆ.
 
ಹೊಸತಿಂಗಳ ಹುಟ್ಟಿನೊಡನೇ
ತೂಕಕ್ಕೆ ಒಲಿದ
ಪತ್ರಿಕೆಗಳೆಲ್ಲ ಮಾಯ.
ಆದರೂ ಪುಸ್ತಕಸಾಲಿಗಂಟಿದ ಫೈಲಿನಲ್ಲಿ
ಕೆಲವೇ ಕೆಲವು ಪುಟ, ಪುರವಣಿಗಳ
ಧ್ಯಾನ.
ಸೈಕಲ್ ಹತ್ತಿದವನ ಬೆನ್ನ ಹಿಂದಿನ
ಸಪ್ಪೆದಾರದೊಳಗೆ
ಕಾಲದ ಭೂತಕ್ಕೆ ದಿಗ್ಬಂಧನ.
 
ಮುಳುಗುರವಿಯ ಕಿವಿಯ ತುಂಬ
ಸುದ್ದಿಸಂತೆಯ ಹರಾಜಿನ ಕೂಗು.
ಕೊನೆಯ ಕಿರಣವೆಸೆದು ಬೆನ್ನು ತಿರುಗಿಸುವವರೆಗೆ
ನಿಧಾನ ಮರೆಯಾಗುತಿರುವವನ
ಖುಷಿ ಮಿಶ್ರಿತ ನೋವಿನ ಮುಖ
ಕವಿದ ರಾತ್ರಿಯ ತೆಕ್ಕೆಗೆ.
 
 

‍ಲೇಖಕರು avadhi

15 October, 2013

1 Comment

  1. amardeep.p.s.

    ಚೆನ್ನಾಗಿದೆ ಕವಿಗಳೇ …….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading