ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೃಜನ್ ಕಲೆಗೆ ರಮೇಶ್ ಅರೋಲಿ ಕವನ

ಬೆರಳ ತೋರಿಸಿ ಹೊರಟುಬಿಡು ಸಖಿ

-ರಮೇಶ ಅರೋಲಿ

ಬೆರಳ ತೋರಿಸಿ ಹೊರಟುಬಿಡು ಸಖಿ ಶವದ ಮೇಲೆ ಸುರಿಯದಿದ್ದರೇನು ಸುಗಂಧಗಳನು ಸ್ಪರ್ಶಿಸಿ ಹೊರಟುಬಿಡು ಸಖಿ ಕಣ್ಣ ಹೂಗಳು ಬಿಡುವ ಅತ್ತರಿನ ಹನಿ ಕೊಳ್ಳುವವರಿರಲು ಮನ್ನಿಸಿ ಹೊರಟುಬಿಡು ಸಖಿ ಬದುಕುವಾಸೆಯನು ಬಸೆದುಕೊಟ್ಟೆ ಅದೊಳಿತು ಋಣಿ ನಿನಗೆ ಸ್ಮರಿಸಿ ಹೊರಟುಬಿಡು ಸಖಿ ಸಾವ ಶಬ್ಧಕ್ಕೆ ಈಸೊಂದು ಅರ್ಥ ಕೊಟ್ಟವರು ಜಗದಿ ಇನ್ನಿಲ್ಲದಿರಲು ನನೆಸಿ ಹೊರಟುಬಿಡು ಸಖಿ ಲೋಬಾನದ ಮೆಹಫಿಲ್ ಸಂಜೆಗಳ ಕೀಮತ್ ತಿಳಿದು ಹಠಬೇಡ ಕ್ಷಮಿಸಿ ಹೊರಟುಬಿಡು ಸಖಿ ಜಾವದ ಇಬ್ಬನಿ ಯಾರ ಹಣೆಮೇಲೆ ನೀರಾಗುವುದೋ ಊಹಿಸಿ ಹೊರಟುಬಿಡು ಸಖಿ ನಾಳೆಯ ದೇವರು ನಡುರಸ್ತೆಗಿಳಿದು ಸ್ಮಶಾನದ ದಾರಿ ಕೇಳಲು ಬೆರಳ ತೋರಿಸಿ ಹೊರಟುಬಿಡು ಸಖಿ ಬಿಕ್ಕಳಿಸುವ ಚಂದ್ರ ಬೀದಿಗಿಳಿಯಲು ದೀಪಗಳ ಜರೂರೇನು ಆರಿಸಿ ಹೊರಟುಬಿಡು ಸಖಿ ಈಗಾಗಲೇ ಮತ್ತೇರಿರಬಹುದಾದ ಸುಲ್ತಾನ್-ಸುಖಬೀರರಿಗೆ `ಅರೋಲಿ’ಯ ಬರುವಿನ್ನು ಮತ್ತೊಂದು ಬಟ್ಟಲಿಗೆ ನೆಪವೆಂದು ತಿಳಿಸಿ ಹೊರಟುಬಿಡು ಸಖಿ (ಎಳೆಯ ಪಾಪದ ಹೆಸರು ನಿಮ್ಮಿಚ್ಛೆಯಂತೆ ಇಟ್ಟುಕೊಳ್ಳಿ ಸಂಕಲನದಿಂದ )]]>

‍ಲೇಖಕರು G

5 May, 2012

1 Comment

  1. savitri

    Nice one:-)

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading