ಚಾರ್ ಮಿನಾರ್ ಸಾಕ್ಷಿಯಾಗಿ
ಸೃಜನ್
ತೆಲುಗು ಮೂಲ : ವರವರರಾವ್

ನಾನ್ನೂರು ವರ್ಷಗಳು ಕಳೆದರೂ
ಚಾರ್ಮಿನಾರ್ ಗೆ ಕೊಂಬುಗಳೇನೂ ಬಂದಿಲ್ಲ
ಆಗಸದ ಕೆಳಗೆ ವಿಧೇಯಳಾಗಿ
ಮಸುಕು ಆಕೃತಿಯಲ್ಲಿ ನಿಂತೇ ಇದೆ
ತನ್ನ ಅತಿ ಮೃದು ಪುರಾತನ ಕಲ್ಲಿನ ಎದೆಯಲ್ಲಿ
ಏನು ಅವಿತಿಟ್ಟು ಕೊಂಡಿದೆಯೇನೋ
ಪಾರಿವಾಳಗಳನ್ನು ಮಾತನಾಡಿಸುವದರ ಹೊರತು
ಪ್ರಾರ್ಥನೆಗಳನ್ನು ಮಾಡುತ್ತಿಲ್ಲ .
ಎಷ್ಟೋ ವರ್ಷಗಳಿಂದ ಬಜಾರಿನಲ್ಲಿ ನಿಂತಂತೇ ಇದೆ
ಆರ್ಟೀಸಿ ಬಸ್ಟಾಂಡ್ ಕಾಲದಿಂದಲೂ
ರಾತ್ರಿ ಬಜಾರ್ ವರೆಗೆ
ಮಾರ್ಕೆಟ್ ಓಟದ ಸ್ಪರ್ಧೆಯಲ್ಲಿ ನಲುಗಿ ಹೋಗುತ್ತಾ
ಮೆಟ್ಟಿಲು ಹತ್ತುವ ಪುಢಾರಿಗಳ ಬೂಟುಗಳ ಕೆಳಗೆ ಧೂಳಾಗುತ್ತಾ .
ಎಷ್ಟು ಹೋರಾಟಗಳ ತಲವಾರಗಳ
ಎಷ್ಟು ಭಾಷ್ಪವಾಯು ಗೋಲಗಳ
ಎಷ್ಟು ಕವಾಯತು ,ಕರ್ಫ್ಯೂಗಳ
ಖಾಕಿ ತೂಟಾಗಳ
ಗಾಯಗಳ ಪ್ರಾಣಹರಣಗಳಿಂದ
ಚಿಮ್ಮಿದ ನೆತ್ತರಿನಿಂದ ತೊಯ್ದಿದೇಯೇನೋ
ಮಳೆಗಿಂತ ನೆತ್ತರದಿಂದ ಜಾಸ್ತಿ ತೊಯ್ದಿದೆ
ಚಳಿಗಿಂತ ಕರ್ಫ್ಯೂ ದಿಂದಲೇ ನಡುಗಿದೆ
ಬಿಸಿಲಿಗಿಂತ ನಿರ್ಲಕ್ಷ್ಯಕ್ಕೆ ಹೆಚ್ಚು ಒಣಗಿದೆ
ತಲೆಯೆತ್ತಿ ಬೆರಗಿನಿಂದ ತನ್ನ ಪುರಾತನ ಸೌಂದರ್ಯ ನೋಡುವ
ದಿನನಿತ್ಯದ ಸಾಮಾನ್ಯ ಪ್ರೇಕ್ಷಕನಿಗೆ
ತನ್ನ ಮನದಾಳದ ಯಾವ ನೋವನ್ನು ಪಿಸುಗುಟ್ಟಿದೆಯೋ .
*ಮೈಸಮ್ಮ ಯಾವಾಗ ಬಂದಳು ಅಲ್ಲಿಗೆ
ಮೈಸಮ್ಮ ಯಾವಾಗ ಅಷ್ಟೊಂದು ಭಾಗ್ಯವಂತಳಾಗಿ
ಚಿನ್ನದ ಜನರ ದೇವತೆಯಾಗಿದ್ದಾಳೆ ?
ಚೆಂಚರ *ಭಾಗಮತಿ ಮತಿಭ್ರಮಿಸಿ
ಸಂಸ್ಕೃತ ಭಾಗ್ಯಲಕ್ಷ್ಮಿ ಯಾವತ್ತಾದಳು ?
ಮಸೀದಿಗಳಿಂದ
ದೇವಸ್ಥಾನ ವಿವಾದಗಳು
ನಂಬಿಕೆಗಳ ಗಡಿದಾಟಿ
ಇತಿಹಾಸದೊಳಕ್ಕೆ ಸ್ವಾರ್ಥದ ಧರ್ಮ
ಕೊಳಚೆಯಾಗಿ ಹರಿವ ಸಮಯಕ್ಕೆ
ಮನಸ್ಸು ಬಿಚ್ಚಿ ಹೇಳುವ ಚಲನ ಸಾಕ್ಷಿ
*ಮೂಸಿ ಮೌನವಾಗಿದೆ
ಒಡ್ಡಿನಮೇಲಿನ ತಕ್ಕಡಿ ಸ್ಟೇ ತಂದಿದೆ
ಪುರಾತತ್ವ ನಿರ್ಮಾಣಗಳ ತಳದ
ನಂಬಿಕೆಗಳ ಭೂಕಂಪಗಳನ್ನು
ಚುನಾವಣೆಯ ಸೀಸ್ಮೊಗ್ರಾಫ್ ದಾಖಲಿಸುತ್ತಿದೆ
‘ ವಾತಾವರಣ ಉದ್ರಿಕ್ತವಾಗಿದೆ ಆದರೂ
ಹತೋಟಿಯಲ್ಲಿದೆ ‘
* ಮೈಸಮ್ಮ – ಹೈದರಾಬಾದಿನ ಪುರಾತನ ವಾದದೇವತೆ.
*ಭಾಗಮತಿ – ಹೈದರಾಬಾದ್ ನವಾಬ್ ಮದುವೆಯಾದ ಗಿರಿಜನ ಯುವತಿ
*ಮೂಸಿ – ಹೈದರಾಬಾದ್ ಹೃದಯಭಾಗದಲ್ಲಿ ಇಂದಿಗೂ ಹರಿವ ಪುರಾತನ ನದಿ






ಮೂಸಿ ಮೌನವಾಗಿದೆ
ಒಡ್ಡಿನಮೇಲಿನ ತಕ್ಕಡಿ ಸ್ಟೇ ತಂದಿದೆ
ಪುರಾತತ್ವ ನಿರ್ಮಾಣಗಳ ತಳದ
ನಂಬಿಕೆಗಳ ಭೂಕಂಪಗಳನ್ನು
ಚುನಾವಣೆಯ ಸೀಸ್ಮೊಗ್ರಾಫ್ ದಾಖಲಿಸುತ್ತಿದೆ
‘ ವಾತಾವರಣ ಉದ್ರಿಕ್ತವಾಗಿದೆ ಆದರೂ
ಹತೋಟಿಯಲ್ಲಿದೆ ‘..aa samaajamukhi chintaka varavararao gondu namana….
INTA OLLE PADYA ANUVAADA MAADIDDAKKE THANKU SO MUCH SIR…
Olleya Anuvaada