ಅಕ್ಕ ಕಂಡ ಕನಸೂ..?!
– ಎಂ ಎಂ ಶೇಕ್ ಯಾದಗಿರಿ
ತೆರದ ಕಣ್ಣಲ್ಲಿ ಕಂಡ ಕನಸು
ಚಂದ್ರನದ್ದೋ ,ಸೂರ್ಯನದ್ದೋ …??!
ನನಗೆ ಸೂರ್ಯನನ್ನು ಹಿಡಿವ ಆಸೆ…
ಹಿಡಿಯುವದಷ್ಟೇ ಅಲ್ಲ, ಮುಡಿವ ಆಸೆ ಕೂಡ!!!
ಅತಿಯಾಗಿ ಬಯಕೆಗಳು ಹುಟ್ಟುತ್ತವೆ..
ಅವಕ್ಕೆ ಮಳೆಯೇನೂ ಬೇಡ …!
ಕೆಲವೊಂದು ಸಲ ನಾಯಿಕೊಡೆಗಳಂತೆ
ಮುಟ್ಟುವಲ್ಲೆಲ್ಲಾ ಎದ್ದುಬಿಡುತ್ತವೆ …
ನನ್ನಲ್ಲೇ ಹುಟ್ಟಿ, ನನ್ನಲ್ಲೇ ಬೆಳೆದು..
ಬಯಸುವುದು ನಿನ್ನನೆಂದರೆ ..ವಿಚಿತ್ರ !!
ಸಿಟ್ಟು ಬಂದು ಸೂರ್ಯನೆಡೆ ವಾಲುತ್ತೇನೆ..
ಕೈ -ಬಾಯಿ ಸುಟ್ಟುಕೊಂಡು..
ಅರೆಕ್ಷಣ ಸುಮ್ಮನಾಗುತ್ತೇನೆ…!!
ಹೀಗೂ ಇದ್ದಾವೆ ಮೊಗ್ಗುಗಳು ,ಹೂಗಳು..
ಅವು ಹೀಚಾಗುತ್ತವೆ,ಕಾಯಾಗುತ್ತವೆ ..ಕೊನೆಗೂ ,
ಹಣ್ಣಾಗುತ್ತವೆ …ಇದು ಸತ್ಯ ….ಇದರ
ಅರಿವು ಉಂಟಾಗಲು ಕೆಲವೊಮ್ಮೆ ಬುದ್ಧನನ್ನು ಅರಸುತ್ತ ..
ಅರ್ಧರಾತ್ರಿಗೆದ್ದು ಹೊರಟುಬಿಡುತ್ತೇನೆ…!!
ಕೊನೆಗೂ ದಕ್ಕಿದ್ದು ;ಬಯಸಿದ್ದಾವುದೂ ಅಲ್ಲ..
ಮರ ಹಾಗೂ ಮರದ ನೆರಳು…!
ಹೆಚ್ಚೆಂದರೆ ಮರದಿಂದ ಇಳಿಬಿದ್ದ ಬಿಳಲು….!!!
]]>




0 Comments