ಸೂರ್ಯಕೀರ್ತಿ
**
ಅವಳ ಕೇಳಿದೆ
ನಿನಗೆ ತೃಪ್ತಿ ಬೇಕೆ ? ಎಂದು
ಅವಳು ಕಣ್ಣುಗಳ
ಅರಳಿಸಿ ನೋಡಿದಳು
ಅದು ಲೈಗಿಂಕ ಸುಖವೋ
ಪ್ರೀತಿಸುವ ಸುಖವೋ
ಎನ್ನುವಷ್ಟರಲ್ಲಿ
ವಸಂತಕಾಲ ಕಳೆದು
ವಿರಹದ ಬೇಸಿಗೆ ಕಾಲ ಶುರುವಾಗಿತ್ತು.
ಮತ್ತೊಮ್ಮೆ ಅವಳ
ಕೇಳಿದೆ,
ನಿನಗೆ ಪರಿಪೂರ್ಣ ತೃಪ್ತಿ ಬೇಕೆ ? ಎಂದೆ
ಅವಳ ತುಟಿಗಳು ಬಿರಿದವು
ಅಲ್ಲಿ ನಕ್ಷತ್ರಗಳು
ಹೊಳೆದವು.
ಹುಣ್ಣಿಮೆಯ ರಾತ್ರಿ
ಅವಳ ತೋಳುಗಳ ಹಿಡಿದು
ಕೇಳಿಕೊಂಡೆ;
ನಿನಗೆ ತೃಪ್ತಿ ಇದೆಯೇ ಎಂದು
ಪೂರ್ಣ ಚಂದ್ರನ ಕಡೆ
ಕೈ ಬೀಸಿ ತೋರಿಸಿದಳು
ಅವಳ ತುಟಿಗಳಿಗೆ
ನನ್ನ ತುಟಿಗಳ
ಸೇರಿಸಿದೆ – ಚಂದ್ರ ಅರ್ಧ ತುಂಡಾಗಿ
ಅಮಾವಾಸ್ಯೆಯ ಕತ್ತಲು
ಆವರಿಸಿತು.
ಇನ್ನು ಕೇಳುತ್ತಲೇ ಇದ್ದೇನೆ
ಅವಳು
ಆಕಾಶವ ತೋರಿಸಿ
ತಂಗಾಳಿಯ ರಹಸ್ಯಗಳ
ತೋರಿಸುತ್ತಲೇ ಇದ್ದಾಳೆ,
ನಾನು ಕೇಳುತ್ತಲೇ ಇದ್ದೇನೆ
ಪ್ರೇಮದ ವಸಂತಗಳನ್ನು
ಕಳೆದು ವಿರಹದ
ಚಳಿಗಾಲಗಳು ಬರುತ್ತಲೇ ಇವೆ.
ಚೆಂದದ ಅನುವಾದ