ಕವಿತೆಯ ಬೆನ್ನಟ್ಟಿ ಹೊರಟಿರುವ ಸೂರಿ ‘ನಿಮ್ಮ ಪ್ರೋತ್ಸಾಹ ಹೆಚ್ಚಾಗಿದೆ. ಪರಿಣಾಮ ನೀವೇ ಅನುಭವಿಸಿ’ ಎಂದು ಮತ್ತೊಂದು ಕವಿತೆ ಕಳಿಸಿದ್ದಾರೆ. ಗುಲ್ಜಾರ್ ಕವಿತೆಯ ಮೋಡಿಯಲ್ಲಿ ಹುಟ್ಟಿದ ಸೂರಿ ಕವಿತೆ ಇಲ್ಲಿದೆ.

ಎದೆಯಲ್ಲೇ ಮಡುಗಟ್ಟಿದೆ ಕವನ.
ತುಟಿಗಂಟಿ ಕೂತಿವೆ ಉಪಮೆಗಳು.
ಪಡಪಡಿಸುತ್ತಿವೆ ಪದಗಳು ಚಿಟ್ಟೆಯಂತೆ
ಕಾಗದದ ಮೇಲೇಕೋ ಕೂರವು.
ಕೂತಿದ್ದೇನೆ ಖಾಲೀ ಕಾಗದದ
ಮೇಲೆ ಬರೆದು ನಿನ್ನ ಹೆಸರು.
–
ನಿನ್ನ ಹೆಸರೊಂದೇ ಸಾಕು ಬಿಡು
ಅದಕಿಂತ ಬೇರೇನು ಕವನ ಬೇಕು.
ಸೂರಿ ಬರೆದ ಕವಿತೆ
ನಿಮಗೆ ಇವೂ ಇಷ್ಟವಾಗಬಹುದು…





wah wah! chennaagide
– keshav
ಹೆಸರಿನಲ್ಲೇನಿದೆ ಮಹತ್ವ?
ಪ್ರಸರಿಸಿದೆ ಕವಿ ಶೇಪಿ ತತ್ವ!
ಹೆಸರಿಡುವುದು ಸುಲಭ ಸತ್ವ
ಹೆಸರ ಪಡೆವುದೆ ಮಹತ್ವ!
ಕೇವಲ ಕೆಲರ ಬಾಳ್ಗುಣ ದೇವಸಮಾನತ್ವ
ಪ್ರೇಮಪರಾಜಿತರಿಗೆ ಪ್ರಿಯಳ ಹೆಸರೇ ದೈವತ್ವ
ಸೋಮರಾರಾಜಿತ ಪ್ರಭಲ ಜಾಲ ಪ್ರಭುತ್ವ
ಎಚ್ಚರಿಸದವನ ಪ್ರೇಮತಲ್ಲೀನ ಗಮನ ಶ್ರೇಷ್ಟತ್ವ
ಸೆರೆಬಿದ್ದ ಪ್ರೇಮಿಗವಳ ಹೆಸರೆ ಕೇಂದ್ರಬಿಂಧು,
ಪ್ರೇಮಸಾಗರದಿ ಬಿಂಬಿಸಿ ತಳತಳಿಸುವ ಚಂದು.
ಅವಳ ಹೆಸರೆ ಪ್ರೇಮಿಗೆ ಬಾಳಿನ ಸರ್ವಸ್ವ
ಅದವನಿಗೆ ಶಾಶ್ವತ ಗ್ರಹಣದ ಸರ್ವೇಶ್ವ!
– ವಿಜಯಶೀಲ, ಬೆರ್ಲಿನ್, ೧೦.೧೦.೨೦೦೯
nice!!!!