ಪದ್ಯಗಳು
-ಶಿವಪ್ರಸಾದ ಪಟ್ಟಣಗೆರೆ
ಎಲ್ಲವನ್ನು
ಹೊದ್ದು(ಒದ್ದು)
ಮಲಗುವವನಿಗೆ
ಸದ್ದು
ಕೂಡ
ಸಾವೇ..
ನಗು
ತೆಗಳು
ಮಗುಳು
ಎಂಬೆಲ್ಲಾ
ನಗ್ನಗಳಾಚೆ
ಬದುಕಬೇಕೆಂದಿದ್ದೆ,..
ಕ್ಷಮಿಸಿ
ನಾನು ಮನುಷ್ಯ,..
ಒಮ್ಮೆಯಾದರೂ
ಕಣ್ಣುಬಿಡು
ನನ್ನೆದೆಯ
ಭಾವಗಳಿಗೆ
ಬೆಂಕಿಕೊಡುತ್ತೇನೆ,..
ಕಾವಿ ಎಂಬ
ಕೋಡಿಯಲ್ಲಿ
ಜಾತಿ ಕೂಡ
ಹರಿದಿದೆ,..
ಸುಳ್ಳು ಎಂಬ
ನೆತ್ತರಲ್ಲಿ
ಸೋತ ಮಣ್ಣು
ಉಳಿದಿದೆ.
ನೋಡು
ನೋಡು
ಭಾರತ…..
ಭಾಗ್ಯ,.ವಿಧಾತಾ….
ಸತ್ಯವೆಂಬುದು
ಪಾರದರ್ಶಕ ಬಟ್ಟೆ
ಸುಳ್ಳು
ಅದರೊಳಗಿನ
ನಗ್ನ ರೂಪ







nice..