ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಮಾ ಮುದ್ದಾಪುರ್ ಬೆಂಗಳೂರಿಗೆ ಬಂದಾಗ

ಸುಮಾ ಮುದ್ದಾಪುರ್

ಬೆಂಗಳೂರು ಎಂದರೆ ಒಂದು ಸಿಟಿ, ಅದು ನಮ್ಮ ಊರಿನ ಹಾಗೆ ಸಣ್ಣದಲ್ಲ ಎಂದು ಮೊದಲೇ ಗೊತ್ತಿತ್ತು ನನಗೆ.  ಒಮ್ಮೆ ನಮ್ಮ ಸಖಿ ಸಂಸ್ಥೆಯಿಂದ ಬೆಂಗಳೂರಿನಲ್ಲಿರುವ ಸಂವಾದದಲ್ಲಿ ‘ಯೂತ್ ಡೆವೆಲಪ್ಮೆಂಟ್ ಟ್ರೈನಿಂಗ್’ ಗೆ ನೀನು ಹೋಗು ಎಂದು ಅಂದಾಗ ನನಗೆ ಒಂದು ರೀತಿಯಲ್ಲಿ ಖುಷಿಯಾಯಿತು. ಅದೇ ಮೊದಲ ಬಾರಿಗೆ ನಾನು ಬೆಂಗಳೂರಿಗೆ ಬಂದದ್ದು.  ನನ್ನ ಸ್ನೇಹಿತೆ ಮಂಜುಳ ಜೊತೆ ಟ್ರೈನ್ ನಲ್ಲಿ  ಬಂದೆ.  ನಾನು ಟ್ರೈನ್ ನಲ್ಲಿದ್ದಾಗ ಯಾವಾಗ ಬರುತ್ತೆ ಬೆಂಗಳೂರು ಎಂದು ಕಾಯುತ್ತಿದ್ದೆ.  ಏನೋ ಒಂದು ರೀತಿಯ ಕುತೂಹಲವಿತ್ತು.  ಆಗ ಬೆಳಗ್ಗೆ 7 ಗಂಟೆಯಾಗಿತ್ತು. ಬೆಂಗಳೂರಿನ ರೈಲ್ವೆ ಸ್ಟೆಷನ್ ಗೆ ಬಂದಾಗ. ಟ್ರೈನ್ನಿಂದ ಕೆಳಗಿಳಿದ ತಕ್ಷಣ ನೋಡಿದರೆ ದೊಡ್ಡ ರೈಲ್ವೆ ಸ್ಟೆಷನ್ ಅದು.  ನಾನು ಯಾವತ್ತು ಅಷ್ಟು ದೊಡ್ಡ ರೈಲ್ವೆ ಸ್ಟೆಷನ್ ನ ನೋಡಿರಲಿಲ್ಲ.  ಎಷ್ಟೊಂದು ಜನ ಅಬ್ಬ ಅಂತ ಅನ್ನುಸ್ತು.  ಒಂದೇ ಸಮ ಜಾತ್ರೆ ಕಂಡಂತೆ ಕಾಣ್ತ ಇತ್ತು ಆ ರೈಲ್ವೆ ಸ್ಟೆಷನ್.  ಎಲ್ಲಾ ಪ್ಲಾಟ್ ಫಾರಂ ಮೇಲೂ ಜನರ ಜಂಗುಳಿ ಎದ್ದು ಕಾಣುತ್ತಿತ್ತು.  ನಾನು ಅಷ್ಟೊಂದು ಜನರನ್ನ ನೋಡಿದ್ದು ನಮ್ಮೂರ ಜಾತ್ರೆಯಲ್ಲಿ ಮಾತ್ರ.  ಇದೇನು ಊರಪ್ಪ ಇಲ್ಲಿ ಕಳೆದು ಹೊದ್ರೆ ಮತ್ತೆ ಸಿಗೋದು ಡೌಟು ಅಂತ ಅನುಸ್ತು.  ಆ ದಟ್ಟವಾದ ಜನ ಜಂಗುಳಿ ನೋಡಿ ಒಂದು ಕ್ಷಣ ಹೆದರಿಕೆಯೂ ಆಯ್ತು.  ಆಮೇಲೆ ಬಸ್ ಸ್ಟಾಪ್ ಗೆ ಬಂದ್ವಿ.  ಅಲ್ಲಿ ನೋಡಿದ್ರೆ ರೈಲ್ವೆ ಸ್ಟೆಷನ್ ನಲ್ಲಿ ಇದ್ದದಕ್ಕಿಂತ ಹೆಚ್ಚು ಜನರಿದ್ರು.  ಅದೇ ಮೊದಲು ಒಂದು ಬಸ್ ಸ್ಟಾಪ್ ನಲ್ಲಿ ಅಷ್ಟೊಂದು ಜನ ಇರೋದನ್ನ ನೋಡಿದ್ದು.

ಅಲ್ಲಿರೋ ಜನರನ್ನ ನೋಡಿದಾಗ ಒಂದು ಕ್ಷಣ ಹೆದರಿಕೆಯೂ ಆಯ್ತು.  ಆ ಜನರನ್ನ ಒಂದು ಕಡೆ ಬಿಡಿ, ಬಸ್ಸುಗಳು ಎನ್ರಿ ಅಷ್ಟೊಂದು!  ನಾನು ಕಣ್ಣು ಕಣ್ಣು ಬಿಟ್ಕೊಂಡು ಹಾಗೆ ನೋಡ್ತ ನಿಂತು ಬಿಟ್ಟಿದ್ದೆ.  ನನ್ನ ಗೆಳತಿ ನನ್ನ ಬಿಟ್ಟು ಆಗ್ಲೆ ಸ್ವಲ್ಪ ದೂರ ಹೋಗಿಬಿಟ್ಟದ್ದಾಳೆ. ನಾನು ವಾಸ್ತವಕ್ಕೆ ಬಂದು ನೋಡಿದಾಗ ಅಲ್ಲಿ ಇದ್ದದ್ದು, ನಾನು ಮಾತ್ರ.  ನನಗೆ ಎಲ್ಲಿ ಹೊಗಬೇಕೂ ಅಂತ ಗೊತ್ತಿಲ್ಲ, ಹೇಗೆ ಹೋಗಬೇಕು ಅಂತ ಗೊತ್ತಿಲ್ಲ.  ಅಲ್ಲೆ ಕೂತುಬಿಟ್ಟೆ ನಾನು. ಮುಂದೆ ಹೋಗಿದ್ದ ನನ್ನ ಗೆಳತಿ ನನ್ನ ಹುಡುಕಿಕೊಂಡು ಮತ್ತೆ ಹಿಂದಕ್ಕೆ ಬಂದ್ಳು.  ನನ್ನ ನೋಡಿ ಏನೇ ಇದು ಬೇಗ ಬೇಗ ಬರೋದಲ್ವ ಅಂತ ಬೈದ್ಲು.  ನನಗೆ ಮಾತುಗಳೆ ಬರ್ತ ಇಲ್ಲ.  ಹೆದರಿಕೊಂಡು ಬಿಟ್ಟದ್ದೆ. ಆಮೇಲೆ ಅವಳನ್ನ ಹಿಂಬಾಲಿಸಿಕೊಂಡೆ ಹೋದೆ ನಾನು. ಯಾಕೆಂದ್ರೆ ಮತ್ತೆ ಅವಳು ನನ್ನ ಬಿಟ್ಟು ಮುಂದಕ್ಕೆ ಹೋಗಿಬಿಟ್ರೆ ಅಂತ.

‍ಲೇಖಕರು avadhi

22 February, 2014

1 Comment

  1. ajit

    Quite nice

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading