ಪ್ರೀತಿ ನಾಗರಾಜ್
ನಿನ್ನೆ ರಾತ್ರಿ ಕುಸುಮ ಬಾಲೆಯ ’ಯೋಳ್ತೀನ್ ಕೇಳಿ’ ಲೋಕಾರ್ಪಣೆಯಲ್ಲಿ ಭಾಗವಹಿಸಿ ಮೈಸೂರಿಗೆ ಬಂದು ಸೇರಿದಾಗ ರಾತ್ರಿ 12.15 ಆಗಿದ್ದಿರಬೇಕು.
ಬರುವಾಗ ಎಷ್ಟು ಜನರನ್ನ ಭೇಟಿಯಾದ ಖುಶಿ ಇತ್ತು. ಒಂಥರಾ ಅನುಭೂತಿಯಲ್ಲೇ ಫ಼ಯಾಜ಼್ ಖಾನ್ ’ಹರಿ…’ಯನ್ನ ಓಲೈಸುವ ಪರಿಯನ್ನೇ ಆಸ್ವಾದಿಸುತ್ತಾ ರಾತ್ರಿಯ ತಂಗಾಳಿ ಸೇವಿಸುತ್ತಾ ಆರಾಮಾಗಿ ಕಾಲು ಚಾಚಿಕೊಂಡು ಕೂತುಕೊಂಡು ಬಂದೆ. ಒಂದು ನಿಮಿಷವೂ ನಿದ್ದೆ ಮಾಡಲಿಲ್ಲ. ಬಸ್ಸಿನಿಂದ ಇಳಿದಾಗ ಒಂಥರಾ ಕಿವಿಯಲ್ಲಿ ಗಾಳಿ ತುಂಬಿದ ಕರುವಿನ ಹಾಗೆ ಆಹ್ಲಾದ ಅನ್ನಿಸುತ್ತಿತ್ತು.
ನಾವಿರುವುದು ಊರ ಹೊರಗೆ. ಅಪ ರಾತ್ರಿಯಲ್ಲಿ ಯಾವ ಆಟೋಗಳೂ ನಮ್ಮ ಮನೆಯ ತನಕ ಬರಲು ಒಪ್ಪುವುದಿಲ್ಲ. ದಾರಿ ಮಧ್ಯದಲ್ಲಿ ತಕರಾರು ಮಾಡುತ್ತಾರೆ. ಹಾಗಾಗಿ ಸುದರ್ಶನ ಬಸ್ ಸ್ಟಾಂಡಿಗೆ ಕರೆದೊಯ್ಯಲು ಬರುತ್ತೇನೆ ಅಂತ ಹೇಳಿ ಬೆಂಗಳೂರಿನ ಬಸ್ಸುಗಳು ಹೊರಡುವ ಕಡೆ ನಿಲ್ಲು ಎಂದಿದ್ದರು.
ಕಾರ್ಯಕ್ರಮವನ್ನೇ ಮೆಲುಕು ಹಾಕುತ್ತಾ, ಫ಼ಯಾಜ಼್ ಖಾನರ ಗುಂಗಿನಲ್ಲೇ ನಾನು ನಿಂತಿದ್ದೆ. ಸುಮಾರು ಜನ ’ಮಿಶ್ಟಿಕ್’ ಮಾಡಿಕೊಂಡು ಹತ್ತಿರ ಹತ್ತಿರ ಸುಳಿದಾಡುತ್ತಾ ಇದ್ದರು. ನಾನೂ ರಿಯಾಕ್ಟ್ ಮಾಡದೆ ಸುಮ್ಮನಿದ್ದೆ.
ಒಬ್ಬ ಮಾತ್ರ ಬಹಳ ಹತ್ತಿರದಿಂದ ಸುಳಿದು ಹೋದ. “ಕಾರ್ ಐತೆ ಬತ್ತೀಯಾ” ಅಂತ ಎರಡು ಸೆಕೆಂಡಿನಲ್ಲಿ ಹೇಳಿ ನನ್ನ ಮುಂದಿದ ಸರಭರ ನಡೆದ್ಕೊಂಡು ದೂರ ಹೋಗಿ ತಿರುಗಿ ನೋಡಿದ. ಕೇಳೋದೇ ನಿಜವಂತೆ ಅದರಲ್ಲೂ ಅಧೈರ್ಯವೇ ಗಂಡಸೇ ಅಂದುಕೊಂಡು ಸಿಕ್ಕಾಪಟ್ಟೆ ನಗು ಬಂತು.
ಅವನು ಮತ್ತೆ ನನ್ನ ಹತ್ತಿರ ಸುಳಿದ. “ನನ್ನ್ ಹತ್ರನೇ ಕಾರ್ ಐತೆ. ಆದ್ರೆ ನಿನ್ ಕೈಲಾಗಲ್ಲ ಬುಡು” ಅಂದುಬಿಟ್ಟೆ.
ಅನಿರೀಕ್ಷಿತ ಪ್ರತಿಕ್ರಿಯೆ ಬಂದದ್ದಕ್ಕೆ ಅವನು ಅಪ್ರತಿಭನಾಗಿ ನಿಂತ.
ನಾನು ಜೋರಾಗಿ ಹೇಳಿದ್ದು ಕೇಳಿ ಸುತ್ತಲಿದ್ದವರು “ಏನಾಯ್ತು ಮೇಡಂ” ಅಂತ ಸಹಾಯಕ್ಕೆ ಬಂದರು.
ಅವನೊಂದು ಪ್ರತಿಕ್ರಿಯೆ ಒಟ್ಟುಗೂಡಿಸುವ ಮುನ್ನ ಗಂಡನ ಕಾರ್ ಬಂತು. ಹತ್ತಿ ತಿರುಗಿ ನೋಡಿದೆ. ಅವನೆಲ್ಲಿದ್ದ? ಎರಡೇ ಸೆಕೆಂಡಿನಲ್ಲಿ ಎಲ್ಲಿಯೋ ಮಾಯವಾಗಿದ್ದ. ಕಾರ್ ಹತ್ತಿದವಳೇ ಜೋರಾಗಿ ನಗಲು ಶುರು ಮಾಡಿದೆ.
ಲೇವಡಿಗಿಂತ ದೊಡ್ಡ ಪ್ರತಿಭಟನೆಯ ದಾರಿ ನನಗೆ ಇನ್ನೊಂದು ಕಂಡಿಲ್ಲ.
“ನಗೆ ಕೊಲ್ಲುವಂತೆ ಹಗೆ ಕೊಲ್ಲಲಾರದು”…





“ಹೊಡಿತೀನಿ ನೋಡು ಅಂದವರಿಗೆ ತಿರುಗಿ ಹೊಡಿ ನೋಡೋಣ” ಅಂದರೆ ಬಾಲ ಮುದುರಿಕೊಳ್ಳುತ್ತಾರೆ.ಇದೇ ರೀತಿ ಧೈರ್ಯ ಹೆಣ್ಣಿಗೆ ಇರಬೇಕಾದ್ದೇ!
ಸೂಪರ್!
“ನಗೆ ಕೊಲ್ಲುವಂತೆ ಹಗೆ ಕೊಲ್ಲಲಾರದು”…
Soooper
He will think again before approaching a woman with that line. Sick man. But the retort is superb. This reminded of a story a woman politician told me a few years back. She was told by her colleagues that women politician will get postings etc because they go and sleep with men who matters. Taken aback, she had retorted by saying, ” ಸರಿ. ನಿಮಗೂ ಒಳೋಳ್ಳೆ ಹುದ್ದೆಗಳು ಸಿಗುತ್ತಲ್ಲಾ..ಹೇಗೆ? ನೀವು ಮಲಗೊಕ್ಕೆ ಆಗೊಲ್ಲ. ನಿಮ್ಮ ಹೆಂಡತೀನ ಕಳಿಸ್ತೀರಾ?” ಅಂದಳಂತೆ.
It is derogatory to women both ways …but that man deserved it .
“ನಗೆ ಕೊಲ್ಲುವಂತೆ ಹಗೆ ಕೊಲ್ಲಲಾರದು”… Superb.!
sooper… 🙂 nage kolluvante hage kollalaradu .. chandada saalu