ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಡು ಬಿಸಿಲಲ್ಲೂ ಬಯಲು ಸೀಮೆಯ ಜನ..

ವೈ ಬಿ ಹಾಲಬಾವಿ

1
ಬಯಲು ಸೀಮೆಯ ಬಿಸಿಲು
ಬರೀ ಬಿಸಿಲಲ್ಲ ಝಳದ ಮಳೆ
ಸುರಿದಂತೆ ಹೆಚ್ಚುವುದು ಬೆವರ ಕಳೆ…!
 
2
ಬಯಲು ಸೀಮೆಯ ಬೆಳಗು
ಬರೀ ಬೆಳಗಲ್ಲ ಕಾದ ಕೆಂಡ ಮೂಡಣ
ಮಾಂಸದಂಗಡಿಯಲ್ಲಿ ರಕ್ತ ಚೆಲ್ಲಿದಂತೆ…!
3
ಬಾಯಾರಿದೆ ಭುವಿ ಬಾನು
ಮೂಡಣಕ್ಕೆ ಬೆಂಕಿ ಬಿದ್ದು…!

4
ಸೂರ್ಯ ಬೀರಿದ ನಗೆಗೆ
ಒಡಲಲ್ಲಿ ಧಗೆ ಧಗೆ
ಧಗ ಧಗಿಸಿ ಉರಿಯಿತು ಧರೆ…!
 
5
ಹಗಲಲ್ಲಿ ಉರಿದ ಸೂರ್ಯ
ಇರುಳಲ್ಲಿ ಹರಡಿದ್ದಾನೆ
ಬಾನ ತುಂಬ ಬೆಂಕಿ ಕೆಂಡ…!
 
6
ಸುಡು ಬಿಸಿಲಲ್ಲೂ
ಬಯಲು ಸೀಮೆಯ ಜನ
ತನು ಮನ ದಣಿಯೇ ದುಡಿಯುತ್ತಾರೆ
ಸುರಿವ ಅವರ ಬೆವರ ಹನಿ ಹನಿಗಳಲ್ಲಿ
ನಿತ್ಯ ಕರಗಿ ನೀರಾಗುತ್ತಾನೆ ಸೂರ್ಯ…!!
 

‍ಲೇಖಕರು avadhi

5 May, 2014

1 Comment

  1. mmshaik

    nice..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading