ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಡುವ ಹೃದಯದ ವಾಸನೆಗೆ ಸಾಟಿ ಇದೆಯೇ?

ಸಂಜ್ಯೋತಿ ವಿ.ಕೆ

ಹೃದಯ ಸುಡುತ್ತಿರುವಾಗ
ಒಂದು ಚಣವನ್ನೂ ವ್ಯಯ
ಮಾಡದೇ ಬೇಗ
ಬೇಗ ಬೇಗ

ಕೈ ಕಾಯಿಸಿಕೊಳ್ಳ ಬೇಕು
ಮೈ ಕಾಯಿಸುವುದನ್ನೂ
ಮರೆಯದಿರು.
ಏಕೆಂದರೆ….
ಹೃದಯಕ್ಕಿಂತ
ಒಳ್ಳೆ ಉರುವಲು
ಈ ಜಗತ್ತಿಗೆ
ಇನ್ನೂ ಸಿಕ್ಕಿಲ್ಲ…
ಸುಡುವ ಹೃದಯ
ಬೇಯುವ ವಾಸನೆಗೆ
ಸಾಟಿ ಇನ್ನೊಂದಿಲ್ಲ ನಿಜ…
ಆದರೆ
ಮೈ ಮರೆತು ಬಿಡಬೇಡ…
ಪೂರ್ಣ ಸುಟ್ಟು ಕರಕಲಾಗಲು
ಅಷ್ಟು ಸುಲಭಕ್ಕೆ ಬಿಡಬಾರದು,
ಮತ್ತೆ ಕೈ ಗೆತ್ತಿಕೋ….
ಹದವಾಗಿ ಉಪ್ಪು ಸವರು,
ಬೇಕೆನಿಸಿದರೆ ಜೊತೆಗೊಂದಿಷ್ಟು
ಖಾರವನ್ನೂ ಸವರ ಬಹುದು….
ಈಗ ಒಂದಷ್ಟು ಆಡಿಸಿಕೋ..
ನೋವನ್ನೆಲ್ಲಾ ಮರೆತು
ನಕ್ಕೀತು… ಮರುಳು…
ಮತ್ತೀಗ ಬೆಂಕಿಗೆ ಹಾಕು…‌

ಹೀಗೇ ಆಡುತಿರು.,
ನಿನ್ನ ಹುಕಿ ತೀರುವ ತನಕ…
ಬೇಸರ ಬಂದಾಗ ಒಗೆದುಬಿಡು
ಬೆಂಕಿಯೊಡಲಿಗೆ.
ಕೈ ಕಾಯಿಸಿಕೊಂಡು
ಹೋಗುವುದ ಮರೆಯದಿರು…
ಏಕೆಂದರೆ…
ಹೃದಯಕ್ಕಿಂತ
ಒಳ್ಳೇ ಉರುವಲು
ಈ ಜಗತ್ತಿಗೆ
ಇನ್ನೂ ಸಿಕ್ಕಿಲ್ಲ….

‍ಲೇಖಕರು admin

24 February, 2018

1 Comment

  1. Anand

    Wow . Ruthlessly true

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading