ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಜಾತಾ ರವೀಶ್ ಕವಿತೆ- ಪ್ರೀತಿಯಲಿ
ಬಾಗಿದವನು ನನ್ನಪ್ಪ…

ಸುಜಾತಾ ರವೀಶ್

ಅರಿವಿನ ಭಂಡಾರದ ಬಾಗಿಲನು
ತೆರೆದಿಟ್ಟವನು ನನ್ನಪ್ಪ
ತಿಳಿವಿನ ಮಂಜೂಷದ ಕೀಲಿಯನು
ಬಿಡಿಸಿಟ್ಟವನು ನನ್ನಪ್ಪ

ಹಿರಿಯರ ಸೇವೆಯಲ್ಲಿ ತೊಡಗಿ ಹಿತವ ಕಂಡವನಲ್ಲವೇ ನೀನು
ಕಿರಿಯರ ಮಮತೆಗೆ ಪ್ರೀತಿಯಲಿ
ಬಾಗಿದವನು ನನ್ನಪ್ಪ

ಮಾನವದು ಪ್ರಾಣಕ್ಕಿಂತ ಹಿರಿದೆಂದು
ಹೇಳಿಕೊಟ್ಟೆ ಅಂದು
ದಾನವನು ಎಡಗೈಗೆ ತಿಳಿಯದಂತೆ ಮಾಡಿದವನು ನನ್ನಪ್ಪ

ಬದುಕಿನ ಬಂಡಿಯ ಎಳೆದ ಪಿತನೆ ಮರೆತು ಬಿಡುವೆನೇ ಹೇಳು
ಬೆಳಕಿನ ಹೊನಲದನು ಬಾಳಿನಲಿ
ಹರಿಸಿದವನು ನನ್ನಪ್ಪ

ಜನುಮ ಜನುಮದಲು ಪಿತನಾಗಿ ನಿನ್ನನ್ನೇ ಕೋರುವಳು ಸುಜಿ
ಮನದ ಅಭಿಲಾಷೆಗಳ ತಕ್ಷಣದಲೇ ಪೂರೈಸಿದವನು ನನ್ನಪ್ಪ

‍ಲೇಖಕರು Admin

20 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading