ಸುಘೋಷ್ ಎಸ್ ನಿಗಳೆ
ಕಾಶಿಯಸ್ ಮೈಂಡ್
ನಾನು ಡೈರಿ ಬರೆಯಲು ಆರಂಭಿಸಿದ್ದು 8 ನೇ ತರಗತಿಯಿಂದ. ಮನೆಯಲ್ಲಿ ಅಮ್ಮ ಮೊದಲಿನಿಂದ ಡೈರಿ ಬರೆಯುವ ಅಭ್ಯಾಸ ಇಟ್ಟುಕೊಂಡಿದ್ದಳು. ಸಹಜವಾಗಿಯೇ ಆ ಅಭ್ಯಾಸ ನನಗೂ ಬಂತು. ಶಾಲಾ ದಿನಗಳಲ್ಲಿ ನಾನು ಬರೆದ ಡೈರಿಯ ಕೆಲ ಆಯ್ದ ಸಾಲುಗಳು ಇಲ್ಲಿವೆ

ಶುಕ್ರವಾರ, ಜನವರಿ 1, 1993.
ಬೆಳಿಗ್ಗೆ ನಾನು ಡೈರಿ ತಂದೆ. ಅಮ್ಮನ ಸೀರೆ ಇಸ್ತ್ರಿಗೆ ಕೊಟ್ಟು ಬಂದೆ. ಬ್ಯಾಂಕಿಗೆ 200 ರೂಪಾಯಿ ಇಟ್ಟು ಬಂದೆ. ಇಂದು ದೊಡ್ಡಮ್ಮನ ಪತ್ರ ಬಂದಿತು. 26-12-1992 ರಂದು ಸ್ವಿಟ್ಜರ್ ಲ್ಯಾಂಡಿನ ಬೆಂಕಿಪೊಟ್ಟಿಗೆ ಭಾರತೀಯಕ್ಕ ತಂದು ಕೊಟ್ಟಳು. ಇಂದು ಅಪ್ಪನಿಗೆ ಸ್ವಲ್ಪ ಆರಾಮಿರಲಿಲ್ಲ.
ಭಾನುವಾರ, ಜನವರಿ 3, 1993.
ಇಂದು ಗರುಡರೇಖೆ ಚಿತ್ರವಿತ್ತು. ಅಪ್ಪ ಮಧ್ಯಾಹ್ನ ಖಾನಾಪುರಕ್ಕೆ ಹೋಗಬೇಕೆಂದು ರೈಲ್ವೆ ಸ್ಟೇಷನ್ನಿನಲ್ಲಿ ಅಪ್ಪನ 200 ರೂಪಾಯಿ ಪಿಕ್ ಪಾಕೆಟ್ ಮಾಡಿದರು. ಇವತ್ತು ಪುರಿ ಮಾಡಿದ್ದರು.
ಮಂಗಳವಾರ, ಜನವರಿ 5, 1993.
ಇಂದು ಶಾಲೆಗೆ ಸೈಕಲ್ ಮೇಲೆ ಹೋದೆ. ಇಂದು ಡ್ರಿಲ್ ಇತ್ತು. ಇಂದು ವಿಸರ್ಜನಾಂಗ ಮತ್ತು ಗ್ರಾಫ್ ಹೇಳಿದರು. ಸುಂದರ್ ಸರ್ ಅಬಸೆಂಟ್ ಇದ್ದರು. ಹಳ್ಳಿಕರ್ ಸರ್ ಗೆ ಆರಾಮಿರಲಿಲ್ಲ.
ಗುರುವಾರ, ಜನವರಿ 5, 1995
ಇಂದು ಬೆಳಿಗ್ಗೆ ಲೇಟಾಗಿ ಎದ್ದೆನು. ಆದರೂ ಕ್ಲಾಸಿಗೆ ಹೋಗಿದ್ದೆ. 5.2 ಬಿಡಿಸಿದೆವು. ಇಂದು ಸ್ಪೋರ್ಟ್ಸ್ ಮೀಟ್ ಸಲುವಾಗಿ ಹೆಸರುಗಳನ್ನು ತೆಗೆದುಕೊಂಡರು. ನಾನು 100 ಮೀ, 200 ಮೀ, ಓಟ, ಹಾಕಿ ಬಾಲ್ ಥ್ರೋ ಮತ್ತು ರೀಲೆಗೆ ಹೆಸರು ಕೊಟ್ಟೆನು.
ಶನಿವಾರ, ಜನವರಿ 7, 1995
ಇಂದು ಕ್ಲಾಸಿಗೆ ರಜೆ ಇತ್ತು. ಶಾಲೆಯಲ್ಲಿ ಜಿ. ಬಿ. ಸರ್ ಬಂದಿರಲಿಲ್ಲ. ಶೀತಲ್ ನ ಕಾಲು ಉಳುಕಿದೆ. ಪುಟ್ಟತ್ತೆ ಬಂದಿದ್ದರು. ಸಚಿನ್ ಬೆಲ್ಲದ್ ಶಾಲೆಗೆ ಬಂದಿದ್ದ. ಬೈಲಹೊಂಗಲದಲ್ಲಿ ಇಂದು ಗಲಾಟೆ ನಡೆಯಿತು. ಪ್ರಾಣಹಾನಿ ಇಲ್ಲ.
ಬುಧವಾರ, ಜನವರಿ 11, 1995
ಕ್ಲಾಸಿಗೆ ಹೋಗಿದ್ದೆ. ಪುಟ್ಟತ್ತೆ ಬಂದಿದ್ದರು. ಶಾಲೆಯಲ್ಲಿ ಫಂಕ್ಷನ್ ಇತ್ತು. ಆದರೆ ಯಾವುದೋ ಕಾರಣದಿಂದ ರದ್ದಾಯಿತು. ಜಿ. ಆರ್. ಜೋಷಿ ಸರ್ ನನಗೆ ಭಾಷಣ ಬರೆದುಕೊಟ್ಟರು. (ಸಂಸ್ಕೃತದಲ್ಲಿ). ಶಾಲೆಯಲ್ಲಿ ಬೀಜ ಗಣಿತ ಮುಗಿಯಿತು
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





0 Comments