ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿಂಹ ಕಟಿಯ ನೀಲವೇಣಿ, ನಿಲ್ಲೆ!

ಫಲವತಿ!!

ಇಂಗ್ಲೆಂಡ್ ನಿಂದ

ಡಾ ಬಿ ಪ್ರೇಮಲತ 

ಮುಡಿಯೇರಿದ ಮಣಿಯ ಬಿಲ್ಲೆ

ಸಿಂಹ ಕಟಿಯ ನೀಲವೇಣಿ, ನಿಲ್ಲೆ!

ನಿತಂಬ ಸೀಳಿ ಹರಿದ ನಾಗವೇಣಿ

ಹೆಜ್ಜೆಯಿಡೆ ಗೆಜ್ಜೆ ಕುಣಿಸಿ, ಹರಿಣಿ!

click-kavite-shilabalike

 

ಕೈಲಿ ಹಿಡಿದ ಉರಿವ ಹಣತೆ

ಯಾರಿಗೆಂದು ನೀ ಸಾಲಂಕ್ರುತೆ?

ಜಗ್ಗಿ ಮುತ್ತಿಟ್ಟಿವೆ ಕರ್ಣ ಕುಂಡಲವು

ಅಪ್ಪಿ ಶೋಡಶಿಯ ನುಣುಪು ಕದಪು!

 

ಹಿಡಿಯಗಲದ  ಕಿರಿಯ ಸೊಂಟ

ನಿತಂಬಿನಿಯ ಈ ನೋಟ ಮಾಟ!

ಮಂಡಿ ಮುಟ್ಟಿದ ಒಯ್ಯಾರದ ಜಡೆ

ರೇಶಿಮೆ ಉಡುಪ ಕುಣಿವ ನಡೆ!

 

ತಣ್ಣನೆಯ ಈ ಮಂಟಪದಿ ತಿರುಗಿ

ಶಿಲೆಯಾಗಿ ನಿಂತರೂ ಈ ಪರಿ

ಬೆಂಕಿಯಂತೆ ಸುಡುವೆ

ಚೆಂದುಳ್ಳಿ ಚೆಲುವೆ, ನೀ ಫಲವತಿ!!!

 

‍ಲೇಖಕರು Admin

10 September, 2016

1 Comment

  1. Giridhar Hampapur

    ನಡೆ ಮುಂದೆ
    ಬರುವೆ ನಾ ನಿನ್ನ ಹಿಂದೆ
    ನಾ ನೋಡ ಬೇಕು
    ನಿನ್ನ ಬಳಕುವ ಸೊಂಟ
    ದಾರಿಗುಂಟ.

    ಮಂಡಿ ತಗುಲಿದ ನಿನ್ನ ಆ ಕುಚ್ಛು
    ಹಿಡಿಸಿದೆ ನನಗೆ ಹುಚ್ಛು
    ಕಟಿ ಬಳಸಿ ಅಳೆಯಬೇಕಿದೆ
    ಗೇಣೊ ಮೊಣವೋ ತಿಳಿಯಬೇಕಲ್ಲ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading