ಶ್ರೀಧರ್ ನಾಯಕ್
ಅನಾರೋಗ್ಯದಿಂದ ಬಳಲುತ್ತಿದ್ದ ತಂಗಿಯನ್ನು ವೈದ್ಯರಿಗೆ ತೋರಿಸಲು ಅಂಕೋಲೆಯ ಹಳೆಯ ಆಸ್ಪತ್ರೆಯಾದ ಮಿಷನರಿ ಆಸ್ಪತ್ರೆಗೆ ಹೋಗಿದ್ದೆ.
ಆಸ್ಪತ್ರೆಯ ಬಾಗಿಲಲ್ಲಿಯೇ ಜ್ವರದಿಂದ ಬಳಲಿ ಬೆಂಡಾಗಿದ್ದ ಕವಯತ್ರಿ, ಅಂಕಣಕಾರ್ತಿ ಶ್ರೀದೇವಿ ಕೆರೆಮನೆ ಚಿಕಿತ್ಸೆಗಾಗಿ ಕಾಯುತ್ತಿದ್ದರು.
ಆಗಲೇ ಗುರುಗಳೂ, ಹೆಸರಾಂತ ಕತೆಗಾರರೂ ಆದ ರಾಮಕೃಷ್ಣ ಗುಂದಿಯವರು ತಮ್ಮ ಪತ್ನಿಯ ಜೊತೆ ವೈದ್ಯರನ್ನು ಭೇಟಿ ಮಾಡಲು ಬಂದರು.
ಆಗ ಅಲ್ಲಿಯೇ ಇದ್ದ ಕವಿ ಜೆ.ಪ್ರೇಮಾನಂದ ನಮ್ಮನ್ನು ಸೇರಿಕೊಂಡರು.
ಸರಿ, ಆಸ್ಪತ್ರೆಯ ವರಾಂಡದ ಮೇಲೆ ಅನಾರೋಗ್ಯದ ಬಳಲಿಕೆಯ ನಡುವೆಯೂ ಸಾಹಿತ್ಯ-ರಾಜಕೀಯದ ಕುರಿತು ಅಲ್ಲೊಂದು ಮಾತುಕತೆ.







0 Comments