ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾವು…!

ಕಾಂತರಾಜು

ರವರು.. ತೀರಿಹೋದರು
ಹಾಗೆಂದು ಅವರು
ಬಹುದಿನದಿಂದ ಚಿಕಿತ್ಸೆ ಪಡೆಯುತ್ತಿದ್ದ
ಬಹುಬೆಲೆಬಾಳುವ ಆಸ್ಪತ್ರೆಯ
ಮುಖ್ಯ ವೈದ್ಯರ ಉದ್ಘೋಷ…!

ಮಾಧ್ಯಮಗಳಲಿ
ರವರು ಬಹು ಅಂಗಾಂಗಳ
ವೈಫಲ್ಯದ ಕಾರಣ ಮರಣ ಹೊಂದಿದರು
ಎಂಬ ಎಕ್ಲೂಸೀವ್ ಸುದ್ದಿ…!

ಟಿವಿ-ರೇಡಿಯೋ, ಪೇಪರಿನ ತುಂಬಾ
ರವರ ಗುಣಗಾನದ ಮಳೆಯ
ಎಡೆಬಿಡದ ಜಡಿತ
ರವರ ಸಹವರ್ತಿಗಳ ನೆನಪುಗಳ
ಮೆಲುಕು ಹಾಕುವಿಕೆಯ ಹಿಮ್ಮೇಳ…!

ನಮಗೆಲ್ಲಾ ತಿಳಿದಿರುವಂತೆ
ರವರ ಬಹು ಅಂಗಗಳು ವಿಫಲಗೊಂಡು
ರವರು ಸತ್ತು ಬಹುಕಾಲವಾಯಿತಲ್ಲ…!

ಅಧಿಕಾರದಮಲಿನಲಿ ತೇಲಾಡುವಾಗ
ಸಂಕಟದ ಆರ್ತನಾದ ಕೇಳದ ರವರ
ಕಿವಿಗಳು ಕಿವುಡಾಗಿ ಬಹುಕಾಲ ಸಂದಿತಲ್ಲ…!

ಕಡು ಕಷ್ಟ ಪಡುವವರ ಕಡೆಗೆ
ಕಿರುನೋಟವನ್ನೂ ಹರಿಸದ ರವರ
ಕಣ್ಣುಗಳು ಇಂಗಿಹೋಗಿ ಬಹಳ ದಿನವಾಯಿತಲ್ಲ…!

ನೆಲ-ಜಲಕೆ ಕೊಳೆ ಹರಿಸುವ
ಕಡತಗಳಿಗೆ ಸಹಿಯನಿಕ್ಕುವಾಗಲೇ ರವರ
ಕೈಗಳು ಸ್ವಾಧೀನ ಕಳೆದುಕೊಂಡಿದ್ದವಲ್ಲ…!

ತನ್ನವರು-ಪರರೆಂಬ ಭೇದವಿರದೆ ಎಲ್ಲರನು ತುಳಿದು
ತಾನು ಬೆಳೆಯಲು ಮೆಟ್ಟಿಲುಗಳನ್ನಾಗಿಸಿದಾಗಲೇ
ರವರ ಕಾಲುಗಳು ಮರಗಟ್ಟಿ ಹೋಗಿದ್ದವಲ್ಲ…!

ಮೂಗಿನಡಿ ನಡೆವ ಭ್ರಷ್ಟತನಕ್ಕೆ
ಕುಮ್ಮಕ್ಕು ನೀಡಿ ಖುಷಿಪಟ್ಟ ರವರ
ಹೃದಯವು ಸ್ಪಂದನೆ ನಿಲ್ಲಿಸಿ ವರ್ಷಹಲವು ಆಯಿತಲ್ಲ…!

ಸ್ವಹಿತವನ್ನೇ ಸಮೂಹ ಹಿತವೆಂದು
ಜನರಿಗೆ ಮಂಕುಬೂದಿ ಸಿಂಪಡಿಸುವಾಗಲೇ ರವರ
ಮೆದುಳು ನಿಷ್ಕ್ರಿಯಗೊಂಡಿತ್ತಲ್ಲ…!

ಭಿನ್ನತೆಯ ಕಿಡಿಗಳಿಗೆ ತಿದಿ ಒತ್ತಿ ಬೆಂಕಿಮಾಡಿ
ಊರ ಬೇಯಿಸಿ ಉಸಿರುಗಟ್ಟಿಸಿದಾಗಲೇ
ರವರ ಉಸಿರು ನಿಂತು ಹೋಗಿತ್ತಲ್ಲ…!

ಈವಾಗ…
ಕೇವಲ ಉಸಿರಾಟ
ಹೃದಯ ಬಡಿತ
ನಿಂತುಹೋದ ಮಾತ್ರಕ್ಕೆ
ರವರ ಸಾವು ಸಂಭವಿಸಿತು ಎಂದರೆ
ಖಂಡಿತ ಅದು ಸಾವಿಗೆ ತೋರುವ
ಅಗೌರವವಲ್ಲದೆ ಮತ್ತೇನು?!

‍ಲೇಖಕರು Avadhi

4 July, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading