ಸೌಮ್ಯ ದಯಾನಂದ
ನೆನಪುಗಳೇ ಹಾಗೆ!
ವರವೋ.!? ಶಾಪವೋ.!?
ನಾವು ಮರೆತರೂ
ಅವಕ್ಕೆ ಮರೆವಿಲ್ಲ!
ಕಹಿಗೆ ಶಾಪ
ಸಿಹಿಯಾದರೆ ವರ!
ಒಂದು ಬಲೂನಿನ ಸೂಜಿ
ಮತ್ತೊಂದು ಪಕ್ಕೆಯ ರೆಕ್ಕೆ!
ಸಾವಿಲ್ಲದ ವರವನ್ನು
ಅವುಗಳಿಗೆ ನೀಡಿದವರಾರೋ!
ಕೂರಬೇಕೆಂದಿರುವೆ
ತಪಸ್ಸಿಗೆ ನಾನೂ
ಇಲ್ಲ..ಇಲ್ಲ..
ಒಂಟಿಗಾಲಲಿ
ಕೈ ಮುಗಿದು ನಿಂತು
ಕಠಿಣವಾದಷ್ಟೂ ಫಲ ಬೇಗ!
ಹಾರುವುದು ಬೇಕಿಲ್ಲ
ಛಿದ್ರವಾಗಬೇಕಿದೆ..
ಅವಳ ಮನದ
ನೆನಪುಗಳಂತೆ!
ಚೂರುಗಳಾದರೂ
ಅವಳ ಕಾಲಿಗೆ ಎಡತಾಕಲಿ!
ಮುಕ್ತಿ ಕಾಣಲಿ..

ಅರೆ!
ಇದೇನಿದು ಇಷ್ಟು ಬೇಗ
ಅಯ್ಯೋ!
ನಾ ಏನ ಕೇಳಬೇಕೆಂದಿದ್ದೆ?!
ಅವಳು..ಅವಳು..ಅದು..ಅದು
ಛೇ…
ಮರುಳಾ..!
ಮರೆವೂ ವರ ಕಾಣೋ..!
ಸರಿ
ಬೇರೆ ಏನಾದರೂ ಕೇಳು..
ನೀನು
ಮಾಡುತ್ತಿರುವುದೆಲ್ಲಾ
ಸರಿಯಾಗಿದೆ..
ಕೇಳುವುದು ಏನೂ ಇಲ್ಲ
ನಿನ್ನ ದರುಶನದ
ಭಾಗ್ಯವೊಂದೇ ಸಾಕು!
ನಿನ್ನ
ಮನಸ್ಸನ್ನು ಅರಿತಿದ್ದೇನೆ
ತಥಾಸ್ತು!!






0 Comments