ಸಾರ್ತ್ ಮತ್ತು ಅನಂತ ಮೂರ್ತಿ – ಜಿ ಎನ್ ನಾಗರಾಜ್

ಜಿ ಎನ್ ನಾಗರಾಜ್

ಅನಂತ ಮೂರ್ತಿ,ಪ್ರತಿಭಟನೆಗಳು, ವಿವಾದಗಳು ಮತ್ತು ಸಾರ್ತ್ ಎಂಬ ಸಾಹಿತಿ :
ಇಂದು ಅನಂತ ಮೂರ್ತಿಯವರ ಬಗೆಗೆ ಬೇಕಾದಷ್ಟು ಮಾತುಗಳ ಹೊಳೆ ಹರಿದಿದೆ. ಅವರು ಸಮಾಕಾಲೀನ ಸಾಮಾಜಿಕ, ಸಾಂಸ್ಕೃತಿಕ , ರಾಜಕೀಯ ಸಂಗತಿಗಳಿಗೆ ಪ್ರತಿಕ್ರಿಯಿಸುತ್ತಾ ವಿವಾದಗಳಿಗೆ ಸಿಕ್ಕಿ ಹಾಕಿಕೊಳ್ಳುತ್ತಿದ್ದ ಬಗ್ಗೆ, ತಾವೇ ವಿವಾದಗಳನ್ನು ಆಹ್ವಾನಿಸಿಕೊಳ್ಳುತ್ತಿದ್ದ ಬಗ್ಗೆ ಸಾಕ್ಷೀ ಪ್ಪ್ರಜ್ಞೆಯಾಗಿದ್ದ ಬಗ್ಗೆ ಇತ್ಯಾದಿ .ಅವರ ಈ ಗುಣಗಳಿಗೆ ಪ್ರೇರಣೆ ನೀಡಿದ ತತ್ವಗಳು, ವ್ಯಕ್ತಿಗಳ ಬಗ್ಗೆ ಈ ಚರ್ಚೆಗಳು ಮಾತುಗಳು ಹೊಳಹು ನೀಡಲಿಲ್ಲ ಎಂದೆನ್ನಿಸಿತು.

ನಾನು ಅವರ ಸಾಹಿತ್ಯ ಬರಹಗಳನ್ನು ಬಹಳ ಹಿಂದೆಯೇ ಓದಿದ್ದೆನಾದರೂ ಕೊನೆಯ ಎರಡು ದಶಕಗಳಲ್ಲಿ , ಮುಖ್ಯವಾಗಿ ಅವರ ಸಾಹಿತ್ಯೇತರ ಕ್ರಿಯಾಶಾಲಿತನದ ಅವಧಿಯಲ್ಲಿಯೇ ಅವರೊಂದಿಗೆ ಬಹಳ ಒಡನಾಡಿದ್ದು. ಈ ಸಮಯದಲ್ಲಿ ಅವರ ವರ್ತನೆಯಲ್ಲಿ ಒಂದು ಪ್ಯಾಟರ್ನ್ ಗಮನಿಸಿದ್ದೇನೆ. ಅನೇಕ ಕಾರ್ಯಕ್ರಮಗಳಿಗೆ ಜನರು ಅತಿಥಿಗಳನ್ನಾಗಿ ಆಹ್ವಾನಿಸಲು ಬರುತ್ತಿದ್ದರು. ಅದರಲ್ಲಿ ಅನಂತಮೂರ್ತಿಯವರು ಯಾವುದನ್ನು ಒಪ್ಪಿಕೊಳ್ಳುತ್ತಿದ್ದರು ಎಂಬುದು ಕುತೂಹಲಕಾರಿ.
ಈ ಕಾರ್ಯಕ್ರಮ ಅವರಿಗೆ ಪ್ರಿಯವಾದದ್ದು ,ಮುಖ್ಯವಾದದ್ದು ಅವರು ಒಪ್ಪಿಕೊಳ್ಳುತ್ತಾರೆ ಎಂದು ನೀರೀಕ್ಷಿಸುವ ಅನೇಕ ಕಾರ್ಯಕ್ರಮಗಳನ್ನು ನಯವಾಗಿ ತಿರಸ್ಕರಿಸಿಬಿಡುತ್ತಿದ್ದರು . ಅಂದು ನಡೆಯುತ್ತಿದ್ದ ಕೆಲವು ಘಟನೆ, ಪ್ರಸಂಗಗಳ ಬಗ್ಗೆ ಅವರಿಗೆ ತಮ್ಮ ವಿಚಾರಗಳನ್ನು ಹಂಚಿಕೊಳ್ಳಬೇಕು , ಒಂದು ಚರ್ಚೆ ಎಬ್ಬಿಸಬೇಕು ಎಂದು ಎನ್ನಿಸುತ್ತದೆಯೋ ಅದಕ್ಕೆ ಅವಕಾಶವಾಗುವ ಕಾರ್ಯಕ್ರಮ ಅದು ಎಷ್ಟೇ ಅಮುಖ್ಯವಾದುದಾದರೂ ಒಪ್ಪಿಕೊಳ್ಳುತ್ತಿದ್ದರು. ಅಲ್ಲಿ ಬೇಕೆಂತಲೇ ವಿವಾದವಾಗುವ ರೀತಿಯಲ್ಲಿಯೇ ಪದಗಳ ಬಳಕೆ ಮಾಡುತ್ತಿದ್ದರು. ಉದ್ದೇಶ ಸ್ಪಷ್ಟ. ಆ ವಿಚಾರಗಳು ಬಹಳ ಕಾಲ ಚರ್ಚೆಯಾಗಬೇಕು . ಸುಮ್ಮನೆ ಪತ್ರಿಕೆಗಳಿಗೆ ಒಂದು ದಿನದ ಸುದ್ದಿಯಾಗುವುದರಲ್ಲಿ ಮುಗಿದುಹೋಗಬಾರದು . ಹೀಗಾಗಿಯೇ ಅವರು ಕರ್ನಾಟಕದಲ್ಲಿ ಒಂದು ಎಚ್ಚರ ಮೂಡಿಸಲು ಸಾಧ್ಯವಾಗಿದ್ದು.
ಹೀಗೆ ಸಾಕ್ಷೀ ಪ್ರಜ್ಞೆಯಾಗುವ ಉಮೇದು ,ಸಾಮಾಜಿಕ ಕ್ರಿಯಾಶೀಲತೆಯ ಮಾದರಿ ಅವರಿಗೆ ದೊರಕಿದ್ದು ಪ್ರಸಿದ್ಧ ಫ್ರೆಂಚ್ ಸಾಹಿತಿ ಸಾರ್ತ್ರ ಅವರಿಂದ ಮತ್ತು ಇಂಗ್ಲೆಂಡಿನ ಹೊಸ ಎಡ ಪಂಥದ ಸಾಹಿತಿಗಳಿಂದ . ಸಾರ್ತ್ರ ಅವರಿಗೆ ಪ್ರಿಯವಾದ ಲೇಖಕರಲ್ಲಿ ಒಬ್ಬ . ಅಸ್ತಿತ್ವವಾದದ ನಿರೂಪಕ .ನನಗೆ ಗೊತ್ತಿರುವಂತೆ ಅವರ ತ್ರಿವಳಿ ಅನಂತಮೂರ್ತಿಯವರಿಗೆ ಪ್ರಿಯವಾದ ಕೃತಿಗಳು. ಅವರು ಫ್ರಾನ್ಸ್ ನಲ್ಲಿ ಏಕ ವ್ಯಕ್ತಿ ಸೈನ್ಯವಾಗಿದ್ದವರು. ಒಬ್ಬ ಲೇಖಕ ತನ್ನ ಜೀವನದಲ್ಲಿ ಅವರಷ್ಟು ಧಾಳಿಗಳಿಗೆ-ಬಹಳ ವೈವಿಧ್ಯಮಯ ಶತ್ರುಗಳಿಂದ , ಬಹಳ ಬಲಶಾಲಿಗಳಿಂದ -ಒಳಗಾದವರು ಮತ್ಯಾರೂ ಇಲ್ಲ . ಎಂಬ ಹೆಸರು ಪಡೆದಿದ್ದವರು.

ಸಾರ್ತ್ ರವರ ಜೀವನ ತತ್ವ ಹೀಗಿತ್ತು : ತಾನು ಜೀವಿಸುವ ಸಮಾಜದ ಕಾಳಜಿಗಳ ಬಗ್ಗೆ ಭಾವನಾತ್ಮಕ ಬದ್ಧತೆ , ಅವುಗಳ ಮೂಲಕ ಇಂದಿನ ಜೀವನದಲ್ಲಿ ಒಂದು ವೇಗವರ್ಧಕವಾಗಿ ಮತ್ತು ಭವಿಷ್ಯಕ್ಕೆ ಒಂದು ಕೊಂಡಿಯಾಗಿ ಬದುಕುವುದು. ಅವರು ಬರೆಯುತ್ತಾರೆ : ಒಬ್ಬ ಲೇಖಕನಿಗೆ ಈ ಪ್ರಮಾಣವನ್ನು ಶಿಫಾರಸು ಮಾಡುತ್ತೇನೆ.ಅವನ ಕೃತಿಗಳು ಸಿಟ್ಟನ್ನು, ತಳಮಳವನ್ನು, ನಾಚಿಕೆಯನ್ನು ದ್ವೇಷವನ್ನು, ಪ್ರೀತಿಯನ್ನು ಉಂಟುಮಾಡಬೇಕು ಆಗ ಅವನು ಜೀವಿಸುತ್ತಾನೆ.
ಅನಂತ ಮೂರ್ತಿಯವರೂ ಈ ಆಶಯಗಳಲ್ಲಿ ಹಲವನ್ನು ಜೀವಿಸಲು ಪ್ರಯತ್ನಿಸಿದ್ದಾರೆ ಎಂಬುದು ಸ್ವಯಂ ಸ್ಪಷ್ಟ . ಹಾಗೆಯೇ ಬ್ರಿಟನ್ನಿನ ರೇಮಂಡ್ ವಿಲಿಯಮ್ಸ್ , ಮತ್ತಿತರರು ಕೂಡ ವಿವಿಧ ವಿಷಯಗಳ ಬಗ್ಗೆ ಪ್ರಶ್ನೆಗಳನ್ನೆತ್ತುವುದು , ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವುದು ಇವುಗಳ ಮೂಲಕ ಻ವರಿಗೆ ಸಾಮಾಜಿಕ ಕ್ರಿಯಾಶೀಲತೆಯ ವಿಷಯದಲ್ಲಿ ಮಾದರಿಯಾಗಿದ್ದರು. ಆದರೆ ಅವರ ಮೇಲೆ ಗಾಢವಾಗಿ ಪ್ರಭಾವ ಬೀರಿದ ಅವರ ವ್ಯಕ್ತಿತ್ವದಲ್ಲಿ ಅತ್ಯಂತ ಪ್ರಭಾವಶಾಲಿಯಾದ ಇಂತಹ ಅನೇಕ ವಿಷಯಗಳೂ ಇಂದಿನ ಚರ್ಚೆಗಳಲ್ಲಿ ಕಾಣದಾಯಿತು.
 

‍ಲೇಖಕರು G

August 23, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Anonymous

    ಸಂಧ್ಯಾರವರೇ , ಇದನ್ನು ಫೇಸ್ ಬುಕ್ ನಿಂದ ಆಯ್ಕೆ ಮಾಡಿ ‘ಅವಧಿ’ಗೆ ಹಾಕಿಕೊಂಡಿದ್ದಕ್ಕೆ ವಂದನೆಗಳು. ಫೇಸ್ ಬುಕ್ ಗೆ ಪೋಸ್ಟ್ ಮಾಡಿದ ಮೇಲೆ ಕೆಲ ಸಣ್ನಪುಟ್ಟ ತಿದ್ದು ಪಡಿ ಮಾಡಿ ಎಡಿಟ್ ಮಾಡಿದ್ದೆ. ನಿಮ್ಮ ಗಮನಕ್ಕೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: