ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಯುವ ಮುನ್ನವೇ ನಿರ್ಗಮಿಸು…

ಮೂಲ : ರಾಬಿಯಾ ಅಲ್ ಬಸರಿ

ಕನ್ನಡಕ್ಕೆ : ಬಿ ಎಂ ಹನೀಫ್

ವಿಪರ್ಯಾಸ
ಆದರೆ ನಮ್ಮ ದೇಹದ
ಅತ್ಯಂತ ಆತ್ಮೀಯ ಕೃತ್ಯಗಳಲ್ಲೊಂದು
ಸಾವು.

ನನ್ನ ಸಾವು ಎಷ್ಟೊಂದು ಸುಂದರವಾಗಿತ್ತು!
ಯಾರನ್ನು ಮುತ್ತಿಡಬೇಕೆಂದು
ಆಗ ಗೊತ್ತಾಗಿತ್ತು!
ನಾನು ಸಾಯುವ ಮುನ್ನ
ಸಾವಿರ ಸಲ ಸತ್ತಿದ್ದೆ.

“ಸಾಯುವುದಕ್ಕೆ ಮುನ್ನವೇ ನಿರ್ಗಮಿಸು”
ಅಂದಿದ್ದರು
ಪ್ರವಾದಿ ಮುಹಮ್ಮದ್

ಸೂರ್ಯನನ್ನು ಮುಟ್ಟಲು
ಯಾವತ್ತೂ ಭಯ ಪಡದ
ರೆಕ್ಕೆಗಳನ್ನು ಹೊಂದು

ನಾನು ಪ್ರೀತಿಸಬಲ್ಲೆ
ಎಂಬ ಭಯ ಹುಟ್ಟಿದ
ಅದೊಂದೇ ದಿನ
ನಾ ಹುಟ್ಟಿದ್ದೆ.

‍ಲೇಖಕರು avadhi

18 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading