ರವಿಕುಮಾರ್ ಟೆಲೆಕ್ಸ್
ಬಾಯಿಗೆ ಬಾವುಟ ತುರುಕಿ
ಕಣ್ಣಿಗೆ ಮೇಣವ ಮೆತ್ತಿ
ಎದೆಗಳಿಗೆ ಗುಂಡುಗಳ ಸುರಿದು
ದೇಶಭಕ್ತಿಯ ಹಾಡು ಮೊರೆದಿದೆ
ಕೇಳಿಸಿಕೊಂಡಿರಾ…?
ನಾನೇ ದೇಶ
ನೀನು ಪರದೇಶಿ
ತುಂಡು ಕಾಗದ, ಮುಷ್ಟಿ ಮಣ್ಣಾದರೂ
ಗಂಟಿಕ್ಕಿ ಕೊಂಡಿರು
ನಿನ್ನ ಮುತ್ತಜ್ಜನ ಮೂಳೆ-ಮಜ್ಜನಗಳ ವಂಶಕಣವಾದರೂ ಬೇಕು
ಇನ್ನೇನು ವಿಚಾರಣೆ ಆರಂಭವಾಗಲಿದೆ.
ಹನುಮಂತನಾಗು ಎದೆ ಸೀಳಿ
ಸಾಕ್ಷಿ ಒದಗಿಸಲು
ಇಲ್ಲವಾದರೆ;
ಬಂಗಾಳಕೊಲ್ಲಿಯ
ದಡದಲ್ಲೋ ತೇಲಿಬರುವ
ಗಡಿಯ ಕಣಿವೆಯಲ್ಲೋ
ಸೈನಿಕರ ಕಾಲಿಗೆ ಸಿಗುವ
ವಲಸಿಗ ಶವವಾಗಿ ಮಹಜರ್ ನಡೆದು ಬಿಟ್ಟೀತು!
ಸದ್ದು……..;
ಪ್ರಜಾಪ್ರಭುತ್ವ ದ ಮೆರವಣಿಗೆ ಬರುತ್ತಿದೆ
ಬಾಯಿ ಬಿಡಬೇಡ






ಒಳ್ಳೆಯ ಧ್ವನಿಪೂರ್ಣ ಕವಿತೆ, ಅಭಿನಂದನೆಗಳು – ರಾಬು