ಎಚ್ ಆರ್ ರಮೇಶ
ಮತ್ತೆ ನೆನಪಾಗುವೆ
ಕಾಲ ಸ್ತಬ್ಧವಾಗುವುದು
ಖಂಡಿತ ಗೋರಿಗಳನ್ನು ಬಗೆದು
ಇತಿಹಾಸವನ್ನು ವಾಸ್ತವದಲ್ಲಿ ನೇತುಹಾಕಿರುವುದನ್ನು
ಕಂಡಿರುವೆ
ಆದರೂ ಹೋಗಿದ್ದು
ಈಗಷ್ಟೇ ಬಿರಿಯುತ್ತಿರುವ ಮೊಗ್ಗು
ಆಕಸ್ಮಿಕದ ಬದುಕಲ್ಲಿ
ನಡೆದದ್ದು ನಡೆಯಬೇಕಿತ್ತೆಂಬಂತೆ ನಡೆದಿದೆ
ಕಾಲಕ್ಕೆ ನೆನಪಿನ ಹಂಗಿಲ್ಲ
ನಿಜ
ಆದರೆ
ನಡೆದದ್ದಕ್ಕೆ ಸಾಕ್ಷಿಯನ್ನು ಕಟಕಟೆಯಲ್ಲಿ ನಿಲ್ಲಿಸಲಾರೆ.
ರಕ್ತ ಮಾಂಸದ ಎದೆಯಲ್ಲಿ ಕರಗಿದೆ







0 Comments