ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಕು ಈ ಜನ್ಮಕ್ಕೆ..

ಜೀವನ್ ಪ್ರಕಾಶನ, ಕೋಲಾರ ಹಮ್ಮಿಕೊಂಡಿದ್ದ ದಸರಾ ಕವಿತೆ ಸ್ಪರ್ಧೆಯಲ್ಲಿ

ಮೆಚ್ಚುಗೆ ಪಡೆದ ಕವಿತೆ 

renuka-helavar

ರೇಣುಕಾ ಹೆಳವರ್

ಒಂದು ಸಣ್ಣ ಸ್ಪರ್ಶಕ್ಕೂ.

ವರ್ಷಗಟ್ಟಲೇ ಕಾದೆ

ಒಮ್ಮೆಯೂ ಮುಟ್ಟಲಿಲ್ಲ

ನಿನ್ನದೇ ಪಿಂಡದ ತುಣುಕು ನಾ

baby footprint with 6 toes

ಎಲ್ಲದಕ್ಕೂ ಬೇಸರಿಸಿ

ಸದಾ ಬೈಗುಳಗಳ ಸಾಲು ಹರಿಸಿ

ಅದೇಕೋ ನನ್ನ ಕಂಡರೆ ನಿನಗೆ ವಾಕರಿಕೆ

 

ಅದೆಷ್ಟೋ ಕನಸುಗಳ

ಕಣ್ಣಂಚಿನ ಸೌಧದಲ್ಲಿ ಕಟ್ಟಿದೆ

ಸಾವಿರ ಸಾವಿರ ನದಿ ಹರಿದರೂ

ಜಗ್ಗಲಾರದೂ,ಮುಟ್ಟಲಾರದೂ

 

ನೀ ನನ್ನ ಮುಟ್ಟದ್ದಕ್ಕೆ

ಪ್ರೀತಿ ನೀಡದ್ದಕ್ಕೆ

ಒಡಲ ಉಡಿಯಲ್ಲಿ ಮಲಗದ್ದಕ್ಕೆ ಬೇಜಾರಿದೆ

ಹಾಗಂತ

ನಿನ್ನ ಮೇಲಿನ ಪ್ರೀತಿ ಕಮ್ಮಿಯಾಗಿಲ್ಲ

ಯಾಕೆಂದರೆ !

ನೀ ನನ್ನವ್ವ

 

ಅದೆಷ್ಟೋ ಪಾಠ ಕಲಿಸಿದೆ

ಪ್ರೀತಿ ನೀಡದೆ

ಪ್ರೀತಿ ಹಂಚಲು ಕಲಿಸಿದೆ

ಕನಸು ಕಿತ್ತು

ಕನಸು ಕಾಣಲು ಕಲಿಸಿದೆ

ದುಃಖ ಹೊದ್ದು ನಗುತ ಬಾಳಲು ಕಲಿಸಿದೆ

ಸಾಕಲ್ಲವೇ ಈ ಜನ್ಮಕ್ಕಿಷ್ಟು.

 

‍ಲೇಖಕರು Admin

19 December, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading