ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸರೋಜಿನಿ ಪಡಸಲಗಿ ಕವಿತೆ- ಒಡ್ಡಬೇಕು ಸವಾಲು…

ಸರೋಜಿನಿ ಪಡಸಲಗಿ

ನಿರ್ದಯಿ ಸಮಯವೇ
ನಿನಗಿಲ್ಲದ ಸ್ವಾತಂತ್ರ್ಯ
ಉಂಟು ನೆನಪುಗಳಿಗೆ
ಮತ್ತೆ ಮತ್ತೆ ಮರಳಲು

ಸಮಯವೇ ನೀನೂ ಬಂಧಿಯೇ
ಇರಿಸಿರಿಸಿ ಎಲ್ಲವನೂ ಬಂಧದಲ್ಲಿ
ಆ ನೋವಿಗೆ ಕಟ್ಟು ಹಾಕಲು ಬಲ್ಲವು
ಹೊರಳಿ ಬರುವ ಸಶಕ್ತ ನೆನಪುಗಳು

ನಿರ್ಭಾವುಕ ನೀ ತುಂಬಿಸುವೆ ಬಿಡದೆ
ಆ ನೆನಪುಗಳಲೂ ಕಹಿಯ ಒಂದೆಡೆ
ಅದೇನು ನೆಮ್ಮದಿಯೋ ನಿನಗೆ ಕಾಣೆ
ಅರಗಿಸಿಕೊಳ್ಳಲೂ ಬೇಕು ಎಲ್ಲವನು

ನಿನಗೇನು ಗೊತ್ತು ಬಲು ನಿಷ್ಠುರ ನೀನು
ಗಟ್ಟಿ ಹಿಡಿತದಿ ನಲುಗುವ ನೋವನು
ನವಿರು ಭಾವಗಳ ಸೋಂಕೇ ಇರದ
ಕಠಿಣ ಕಲ್ಲು ಹೃದಯಿ ನೀನಿರುವಾಗ

ಎಲ್ಲ ರೂಢಿ ಮಾಡ್ತದೆ ತಂಪರಿಯದ
ನಿನ್ನ ನೆರಳು ಕಹಿಗಳಿಗೆಗಳ ಭೇಟಿಯನೂ
ಆ ಕ್ಷಣಕೆ ನೊಂದು ಬೆಂದು ಪಕ್ವವಾಗಿ
ಹೊರಬರಲು ಮತ್ತೆ ತಯಾರಾಗಿ ಎದ್ದು

ಮುಲಾಮು ಸವರಬೇಕು ಗಾಯಕೆ
ಮುಲಾಜಿಲ್ಲದೆ ಒಡ್ಡಬೇಕು ಸವಾಲು
ಹೇಳು ನಾನೇನು ಕಮ್ಮಿಯೇ ನಿನಗೆ
ಪಳಗಿಹೆ ನಿನ್ನ ಗರಡಿಯಲಿ ಎಂದು

‍ಲೇಖಕರು avadhi

3 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading