ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸರಿ ಹೊರಡು, ಪರಸ್ಪರ ಮಾತನಾಡಿಕೊಂಡದ್ದಾಯ್ತು…

ಮಾತನಾಡಿಕೊಂಡದ್ದಾಯ್ತು

ಚಲಂ

ಪರಸ್ಪರ ಮಾತನಾಡಿಕೊಂಡದ್ದಾಯ್ತು
ಒಡಲೊಳಗಿನ ಉರಿಯ
ಗೊತ್ತೆ ಆಗದಂತೆ ಮುಟ್ಟಿ,ಮೈದಡವಿ
ಸಾಂತ್ವಾನಿಸುವ ನೆಪದಲ್ಲಿ
ಕತ್ತಲ ಕಾಯತೊಡಗಿದ್ದೇವೆ
ಅಸಹಾಯಕರಿಗೆ ಕತ್ತಲೇ ಕ್ಷೇಮ
ಸರಿ ಹೊರಡೋಣ
ಪರಸ್ಪರ ಮಾತನಾಡಿಕೊಂಡದ್ದಾಯ್ತು
 
ಅವರವರ ನೋಟಕ್ಕೆ
ನಮ್ಮನ್ನು ಬಯಲಿಗಿಡುವಾಗ
ಸಂಭ್ರಮದಾಚರಣೆಯ ಕುರುಹಾಗಿ
ನಾವಿಬ್ಬರು ಅದಲುಬದಲಾದರೂ
ಆಗಬಹುದಿತ್ತು

ನನ್ನೊಳಗಿನ ಹುರುಪ
ನಿನ್ನೊಳಗಿನ ಜೇನ
ಕೇವಲ ಕೇವಲವಾಗಿ ಸವಿದು
ಬಿರುಕು ನೆಲದಲ್ಲಿದ್ದೇವೆ
ಸರಿ ಹೊರಡೋಣ
ಪರಸ್ಪರ ಮಾತನಾಡಿಕೊಂಡದ್ದಾಯ್ತು
 
ದೀರ್ಘದುಸಿರಿನ ಹಿಂದೆ
ಅಸಂಖ್ಯ ಸಹಜ ಉಸಿರಾಟ
ಸಹಜತೆಯೊಡನೆ ಜತೆಗಿರಬೇಕಿದ್ದ
ದಿನಗಳಲ್ಲಿ
ಹೊರೆಯಾದ ಉಸಿರಿನ ಬೆನ್ನುಬಿದ್ದು
ಕಾಲದ ಹೊರೆಗೂ ಬೆನ್ನು ಗೂನಾಗಿರುವಾಗ
ಇನ್ನೇನಿದೆ.
ಸರಿ ಹೊರಡು
ಪರಸ್ಪರ ಮಾತನಾಡಿಕೊಂಡದ್ದಾಯ್ತು
 

‍ಲೇಖಕರು G

29 October, 2013

2 Comments

  1. nagraj.harapanahalli

    ಕತ್ತಲ ಕಾಯತೊಡಗಿದ್ದೇವೆ
    ಅಸಹಾಯಕರಿಗೆ ಕತ್ತಲೇ ಕ್ಷೇಮ
    ಸರಿ ಹೊರಡೋಣ
    ಪರಸ್ಪರ ಮಾತನಾಡಿಕೊಂಡದ್ದಾಯ್ತು-
    ಈ ಸಾಲುಗಳು ಇಷ್ಟವಾದವು…..ಅಂತರ್ಮುಖಿ ಚಿಂತನೆಗೆ ಅಕ್ಷರದ ಬಟ್ಟೆ ತೊಡಿಸಿದ ಕವಿತೆ.

  2. Anonymous

    Paraspara Matadidantaytu… 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading