
ರವಿ ಅಜ್ಜೀಪುರ
ಬಿರುಬಿಸಿಲಿನಲ್ಲೂ ನಿನ್ನ ನೆನಪು ಸ್ಟ್ರಾಬೆರಿ ಐಸ್ಕ್ರೀಮ್ ತಿಂದಷ್ಟು ತಂಪು!
ಹೊರಗೆ ಹೋಗುವಾಗ ನಿನ್ನ ಕೈಗೆ ನೆನಪಿರಲಿ ಒಂದು ಬಣ್ಣದ ಛತ್ರಿ ತಂದಿದ್ದೇನೆ!
ಕಾದ ನಿನ್ನ ಮೃದುಪಾದಕ್ಕೆ ಮಸಾಜ್ ಮಾಡಲು ಕೈ ಹಾತೊರೆಯುತ್ತಿದೆ!
ಮಟಮಟ ಮಧ್ಯಾಹ್ನ ತಬ್ಬಿಕೊಳ್ಳಲೊಬ್ಬರು ಬೇಕಾಗಿದ್ದಾರೆ ಸಿಕ್ತೀಯಾ?
ಏನೇ ಹೇಳು ಬೇಸಿಗೆಯಲ್ಲೂ ನಿನ್ನ ತುಟಿಯ ಜೇನು ಕಡಿಮೆಯಾಗಿಲ್ಲ ಕಣೆ!
ಬಿಸಿಯಾದ ರಾತ್ರಿಗಳಲ್ಲಿ ನೀನು ಜೊತೆಗಿದ್ದರೆ ಬದುಕು ಇನ್ನಷ್ಟು ಬಿಸ್ಸಿಬಿಸ್ಸಿ!
ಕಳೆದ ಬೇಸಿಗೆಯ ನಾಲ್ಕು ಮುತ್ತು ಬಾಕಿ ಇದೆ ಕೊಡದಿದ್ದರೆ ನನ್ನಾಣೆ!
ಹೊಂಗೆ ಮರದ ಕೆಳಗೆ ನಿನ್ನ ಅಂಗೈ ಹಿಡಿದುಕೊಂಡು ಸುಮ್ಮನೆ ಕೂರಬೇಕು!
ಮಧ್ಯಾಹ್ನದ ಬಿಸಿಲು..ಚಿಲ್ಲಡ್ ಬೀರ್.. ಜೊತೆಗೆ ನೀನಿದ್ರೆ ಲೈಫ್ ಸೂಪರ್!





0 Comments