ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದ್ದೂ ಬರದಂತೆ ಎದ್ದು ಹೋದ..

ಅಲ್ವಿದಾ 

‘ಅಲ್ಲಮ’ ಗಿರೀಶ ಜಕಾಪುರೆ

ಎಲೆಯ ಮೇಲಿನ ಇಬ್ಬನಿಯಂತೆ ಇದ್ದು ಹೋದ
ನಸುನಗುತ್ತಲೇ ಜಗದ ಮೋಹ ತೊರೆದು ಹೋದ

ಅವನ ಅಭಿನಯ ಎಂದೂ ನಟನೆ ಅನಿಸಲಿಲ್ಲ
ಇರುವಷ್ಟು ದಿನ ಎಲ್ಲರ ಮನಸು ಗೆದ್ದು ಹೋದ

ಕೊನೆಯುಸಿರಲ್ಲೂ ವಿನಯ ಮೆರೆದ ವಿನಯವಂತ
ಹೋಗಿರುವ ಸದ್ದೂ ಬರದಂತೆ ಎದ್ದು ಹೋದ

ವಿಧಿ ಬಲವಿರದಿರೆ ಹಸಿರೆಲೆಯೂ ಉದುರುತ್ತದೆ
ನಳನಳಿಸುವಾಗ ಕೊಂಬೆಯಿಂದ ಬಿದ್ದು ಹೋದ

ಎದೆಯಾಮೃತಶಿಲೆಗಳಲಿ ತನ್ನ ಬಿಂಬ ಕೊರೆದ
ಎಂದೂ ಅಳಿಯದಂತೆ ಹೆಸರನು ಬರೆದು ಹೋದ

ಚುಕ್ಕಿಗಳ ಕಣ್ಣು ಕೋರೈಸುವ ಬೆಳಕು ಮೀರಿದ
ಅಭೇಧ್ಯ ಮುಗಿಲಿನಲೂ ರಂಧ್ರ ಕೊರೆದು ಹೋದ

ಭಣಗೊಡುವ ಶಹರಿನಲಿ ಕೊನೆಯ ಯಾತ್ರೆ ‘ಅಲ್ಲಮ’
ವಿದಾಯ ಹೇಳಿ ರಂಗದ ಮರೆಗೆ ಸರಿದು ಹೋದ

‍ಲೇಖಕರು avadhi

30 April, 2020

2 Comments

  1. Jayalaxmi Patil

    ಗಿರೀಶ್, ಇರ್ಫಾನ್ ಅವರಿಗಿದು ನಿಮ್ಮಿಂದ ಸರಿಯಾದ ಶ್ರದ್ಧಾಂಜಲಿ.

  2. Raju Hegde

    Good

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading