ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ ದೊಡಮನಿ ಕವಿತೆ- ಎದೆಯ ಮಂಚದಲಿ…

ಡಾ ಸದಾಶಿವ ದೊಡಮನಿ

ನಮ್ಮೂರ ದಾರಿಯಲಿ
ನಿಮ್ಮೂರ ಸಿಹಿಗನಸು
ಎದೆಯ ರಾಜ್ಯವಾಳುತ್ತಿದೆ
ಎದೆಯ ಮಂಚದಲಿ
ಜೋಡು ಗಿಳಿಗಳು ಕೂತು
ಪ್ರೇಮವಾತುವಾಡುತ್ತಿವೆ

ಪ್ರೇಮದ ಹುಡಿಯಲಿ
ಹೃದಯಗಳು ಮುಳುಗೆದ್ದು
ಗೋಧೂಳಿ ಬರೆಯುತ್ತಿವೆ
ಹದಿಹರೆಯದ ಹೂಗಳಲಿ
ಹೊಸ ಹಾದಿಯ ಬೆಳಕು
ಕತ್ತಲೆಯನು ಕಳೆಯುತ್ತಿದೆ

ಹಳೆಯ ಹಾಡಿಗೆ ಮತ್ತೆ
ಧ್ವನಿ ಪೆಟ್ಟಿಗೆ ಜೋಡಿಸಿ
ಹೊಸರಾಗ ಉಸುರುತ್ತಿದೆ
ಹೆಸರಿಗೆ ನಾನು ಅವಳು
ಇರುವುದು ಒಂದೇ ಹೃದಯ
ಇದನು ಬಿಡಿಸಿ ಹೇಳಬೇಕೆ?

‍ಲೇಖಕರು Admin

23 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading