ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸತ್ಯಮಂಗಲ ಮಹಾದೇವ ಹೊಸ ಕವಿತೆ- ಅಪರೂಪ

ಸತ್ಯಮಂಗಲ ಮಹಾದೇವ

ಸಖೀ
ಅಪರೂಪ ಅಪರೂಪ ನಿನ್ನಾ
ನಗೆಯೇ ಅಪರೂಪ
ಹಾಲು ಕೆನೆಗಟ್ಟುವುದು ಹದವಾಗಿಕಾದು
ನವನೀತಕೆ ದಾಟುವಾ ಸೋಜಿಗದಂತೆ
ಅಪರೂಪ

ಸಖೀ
ಮಳೆಯು ಹೆಣ್ಣಾಗಲು ಹರೆಯ
ಮರಳುವುದು ಭುವಿಗೆ
ಹಸಿರು ಕಾಣಿಸುವ ಆನಂದದ ಎತ್ತರ
ಅಪರೂಪ
ಆ ಹಸಿರು ಸೀರೆಯಲಿ ನಳನಳಿಸುವ ನಿನ್ನ
ಜಗವು ಜವ್ವನೆಯ ಜಪವನೆ ಮರೆವುದು
ಅಪರೂಪ

ಸಖೀ
ಭಾವ ಪಲ್ಲವಿಸೆ ಮನಸು ನವಿಲಾಗುವುದು
ಕನಸೊಡೆಯುವ ಬಣ್ಣದ ಕನಸಿಗೆ
ಮೈ ಮರೆಸುವ ನೀಲಿಯ ಅಪ್ಪುಗೆ
ಅಪರೂಪ
ನೀಲಿಗೆ ನಿಲುಕದ ನಿನ್ನ ನಯನದ
ಕನಸುಗಳೇ ಅಪರೂಪ

ಸಖೀ
ಸ್ಪರ್ಷಕೆ ಕಾಯುವ ಕಣ್ಣಿನ ನೋಟವು
ಅಪರೂಪ
ಜಿಂಕೆಯ ಹೊಂಬಣ್ಣದ ಜಿಗಿತವೆ
ಅಪರೂಪ
ನಿನ್ನ ಕಣ್ಣಲಿ ನೋಟಕೆ
ಸೋತ ಕವಿಯ ಸಾಲು ಅಪರೂಪ

‍ಲೇಖಕರು Admin

21 September, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading