ಸತೀಶ ಕುಲಕಲರ್ಣಿ
ಅವನ ಸರದಿ ಬಂದಾಗ
ಬ೦ದ್ ಆಗಿತ್ತು ಟಿಕೆಟ್ ಕೌಂಟರ್
ಮುಂದೆ ನಿಂತವನಿಗೆ ಸಿಕ್ಕಿತು,
ಹಿಂದಿನವ ಬ್ಲ್ಯಾಕ್ ಕೊಂಡು ಪರಾರಿಯಾದ
ಈತ, ನಿಂತಲ್ಲೇ ನಿಂತಿದ್ದ !
ಸಿಕ್ಕವನು ನಕ್ಕ, ಸಿಗದವ ಅತ್ತ
ಟಿಕೆಟ್ ಕಥೆಯಂತೂ ಮುಗಿತು
ಇನ್ನು ಆಟ ಮಾಟ !
ಮಾಡು ಇಲ್ಲವೆ ನಡಿ
ವಿಧಾನಸೌಧ ಬಾಗಿಲು
ಯಾವಾಗಲೂ ನಿಧಾನ

ಗೌಸಮಿಯಾನ್ ಗ್ಯಾರೇಜ್
ಎಲ್ಲ ಹಳೆ ಟೈರುಗಳು
ಊರು ಬಿಟ್ಟು ಪರಾರಿಯಾದವು,
ಬಂಡಾಯಗಾರರ ಭೀತಿಗೆ !
ಪರದೆ ಹಿಂದೆ ಪರದೆಗಳಿವೆ
ಆಟಗಳ ಹಿಂದೆ ಆಟ,
ಆಡುವವರು ಆಡಿಸುವವರು
ಒಟ್ಟಿಗೆ, ಇದ್ದಾರೆ
ವೇಷ ಒಂದೆ, ಭಾಷೆ ಒಂದೆ
ದೇಶ ಗಡಿ ಎಲ್ಲ ಒಂದೆ
ಆಟ ಮಾತುಗಳು ಬೇರೆ ಬೇರೆ
ಕೆಲವರಿಗೆ ನಿಲ್ಲಲು ಸಾಧ್ಯವಿಲ್ಲ
ಇನ್ನು ಕೆಲವರಿಗೆ ಕೂಡಲು ಕುಣಿಯಲು,
ಹೀಗಾಗಿ
ನಿಂತವರನ್ನೇ ಕುಣಿಸುತ್ತಾರೆ
ಕುಣಿಯುವವರನ್ನು ಮಣಿಸುತ್ತಾರೆ
ಆಳ ಗೊತ್ತಿಲ್ಲ, ಈಜೂ ಗೊತ್ತಿಲ್ಲ
ಆದರೂ ಬಾವಿಗೆ ಬೀಳಲು
ರೆಡಿ ಆಗಿದ್ದಾರೆ






0 Comments