ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಖಿಯಿರದ ರಾತ್ರಿಗಳಲಿ…

ಸಖಿಯಿರದ ರಾತ್ರಿಗಳಲಿ!!

– ದಿಲೀಪ ಹೆಗಡೆ

ಸಖಿಯಿರದ ರಾತ್ರಿಗಳಲಿ

ನಿದಿರೆಗೆ ಬರ ಬಡಿದಿದೆ…

ನೆನಪುಗಳ ಲೋಕದಲ್ಲಿ

ಮನವು ಕಳೆದು ಹೋಗಿದೆ…

ಅವಳ ನೋಟ, ಪ್ರೀತಿಯಾಟ

ಅವಳ ಮಾತು, ಮುತ್ತಿನೂಟ

ಸಿಗದೆ ಸುಡುವ ಶೋಕದಲ್ಲಿ

ಹೃದಯ ಮುಳುಗಿ ಹೋಗಿದೆ..

ಇಲ್ಲ ಮನದ ಮಳಿಗೆಯಲ್ಲಿ

ಹೊಸ ಕನಸುಗಳ ಆವಕ…

ಮಾರಿ ಮುತ್ತ ಪಡೆಯುತಿದ್ದ

ಆ ದಿನಗಳದೆಷ್ಟು ಮೋಹಕ…

ಹೊರಗೆ ಸುರಿವ ಸೋನೆ ಮಳೆ..

ಒಳಗೆ ಸುಡುವ ವಿರಹ ಪಾವಕ

ಕಾಯಿಸಿ ಸತಾಯಿಸುತಿಹನೆ..?

ಪಾಪಿ ಕಾಲ ಸಮಯ ಸಾಧಕ..

***

ಆವಕ = ಬರುವಿಕೆ

ಪಾವಕ = ಬೆಂಕಿ

‍ಲೇಖಕರು G

21 November, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading