ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಭ್ರಮ…

 

-ವಿಜಯರಾಘವನ್ ರಾಮ್ ಕುಮಾರ್

ಸಂಭ್ರಮ
ರಾಲಿ ಮರದಲ್ಲಿ
ಹಳದಿ ಹೂ
ಗೊಂಚಲನ್ನ
ತನ್ನ ಎಲೆತೊಟ್ಟಿನ
ಇರುಕಿನಲ್ಲಿ ಹೊತ್ತ
ಒಂದೆಲೆಗೆ
ವಯಸ್ಸಾಗಿ
ಹಳದಿಯಾಗಿ
ತೊಟ್ಟು
ಕಳಚಿ
ಸುಳಿಗಾಳಿಗೆ
ಅದು ನೆಲಕ್ಕೆ
ಬೀಳುತ್ತಿರುವಾಗ
ಬೀಳುವ ಭಯಕ್ಕೆ
ತರತರಗುಟ್ಟುತ್ತ
ನೆಲಕ್ಕೆ ಬಿದ್ದದ್ದೆ
ಆ ಅಲ್ಲಿದ್ದ
ಹುಲ್ಲಿನ ಬೀಜ
ಅನಘ್ರ್ಯವಾದದ್ದೊಂದು
ತನಗೆ ಸಿಕ್ಕಿದಂತೆ
ಹಿಗ್ಗಿಬಿಟ್ಟಿತು
ಆ ಚಿಕ್ಕ ಜಂಕ್ಷನ್ರೈಲು ನಿಲ್ದಾಣದಲ್ಲಿ ಒಂದು ಅಪರಾತ್ರಿ

ದಿಕ್ಕು ಬದಲಿಸಿಕೊಂಡು
ಬರಲುಹೋಗಿ
ಎತ್ತಲೋ ಹೋಗಿಬಿಟ್ಟ
ರೈಲಿಂಜಿನ್ನು
ನಿದ್ದೆಗಣ್ಣಲ್ಲಿ ನಿದ್ದೆಯಷ್ಟನ್ನಿಟ್ಟು
ರೈಲಿಗೆ ಕಾದು
ಪ್ಲಾಟ್ಫಾರಂನಲ್ಲಿ
ಹಾಯಾಗಿನಿದ್ರೆ ಹತ್ತಿಕೂತಿದ್ದವನಿಗೆ
ಥಟ್ಟನೆಚ್ಚರವಾಗಿ
ಅವನ ಮಾತಾಡುವ
ಎಚ್ಚರವಿರುವವರುಸನಿಹ
ಯಾರೂ ಇಲ್ಲದೆಯಾರನ್ನು
ಹೇಗೆ ಕೇಳಲಿದೇವರೇ
ಅಪರಾತ್ರಿ
ಎಲ್ಲಿಯೋ ಹೋಗಿಬಿಟ್ಟ ರೈಲಿಂಜಿನ್ನು

‍ಲೇಖಕರು avadhi

29 August, 2011

1 Comment

  1. vijayaraghavan

    i have all reasons to love who presented it to you. i also thank you for publishing it. perhaps readers may worry who i am. i am the same R. Vijayayaraghavan you have loved. thank you.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading