ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಘಮಿತ್ರೆ ನಾಗರಘಟ್ಟ ಹೊಸ ಕವಿತೆ – ಆಕೃತಿ…

ಸಂಘಮಿತ್ರೆ ನಾಗರಘಟ್ಟ

ಅವಳು ನಗ್ನ ಆಕೃತಿ
ಯಾರು ಬೇಕಾದರೂ
ಅವಳನು ನೆಲಕ್ಕುರುಳಿಸಬಹುದು
ನೀರೆರೆದು ಬೆಳೆಸಲೂಬಹುದು
ಬೇಕೆಂದಾಗ ಕೈಕಾಲುಗಳನೂ
ತುಂಡರಿಸಬಹುದು..!
ತಲೆಗೂದಲನಿಡಿದು ಗುಂಜಾಡಬಹುದು
ಅವಳನ್ನೇ ಇಟ್ಟಿಗೆಯನ್ನಾಗಿಸಿ
ಮನೆ ಮಾಡಿಕೊಂಡು
ವಾಸ್ತವ್ಯ ಹೂಡಬಹುದು

ಬೇಡದ ಬಂಡೆಯೆಂದು ತಿಳಿದು
ಮಣ್ಣಿನಿಂದ ಕೊರೆದು ಒಡೆದು
ಬೀಳಿಸಬಹುದು!
ಅವಳನ್ನೇ ಖಾಲಿ ಹಾಳೆಯೆಂದು
ತಿಳಿದು ಬೇಕಾದದ್ದನ್ನು ಬರೆದು
ಗೀಚಿ ಬಿಸಾಡಬಹುದು
ಅಷ್ಟಕ್ಕೂ ಅವಳ್ಯಾರೋ ಮಾತು
ಬರುವ ಹೆಣ್ಣಲ್ಲ
ಮಾತು ಬಾರದಿದ್ದರೂ ಸಹಿಸುವ
ನೊಂದುಕೊಂಡೇ ನೋವ ದಹಿಸುವ
ಆಕೃತಿ- ಪ್ರಕೃತಿ

‍ಲೇಖಕರು Admin

20 April, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading