ಏಷ್ಯನ್ ಮೀಡಿಯಾ ಕಲ್ಚರಲ್ ಅಸೋಸಿಯೇಷನ್ ಹಮ್ಮಿಕೊಂಡಿರುವ ನಾಗತಿಹಳ್ಳಿ ಚಂದ್ರಶೇಖರ್ ಚಲನಚಿತ್ರ ಉತ್ಸವದ ಅಂಗವಾಗಿ ಚಲನಚಿತ್ರ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕೊಲಂಬೊದಲ್ಲಿರುವ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದಲ್ಲಿ ( ಐ ಸಿ ಸಿ ಆರ್ ) ನಲ್ಲಿ ಶ್ರೀಲಂಕಾದ ಸಿನೆಮಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಭಾರತೀಯ ಸಿನಿಮಾ ಕುರಿತ ಕಾರ್ಯಾಗಾರವನ್ನು
ಶ್ರೀಲಂಕಾ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಅರುಂಡಿಕಾ ಫೆರ್ನಾಂಡೋ ಉದ್ಘಾಟಿಸಿದರು.
ಭಾರತ ಉಪ ಹೈ ಕಮಿಷನರ್ ವಿನೋದ್ ಕೆ ಜೇಕಬ್ ಅವರು ಕಾರ್ಯಾಗಾರವನ್ನು ಉದ್ಘಾಟಿಸಿದರು.
ಈ ಕಾರ್ಯಾಗಾರವನ್ನು ಏಷ್ಯನ್ ಮೀಡಿಯಾ ಕಲ್ಚರಲ್ ಅಸೋಸಿಯೇಷನ್ ಸ್ವಾಮಿ ವಿವೇಕಾನಂದ ಕಲ್ಚರಲ್ ಸೆಂಟರ್, ಕೊಲಂಬೊದ ಸಹಯೋಗದೊಂದಿಗೆ ಆಯೋಜಿಸಿದೆ.
ವಿವೇಕಾನಂದ ಕಲ್ಚರಲ್ ಸೆಂಟರ್ ನ ನಿರ್ದೇಶಕರಾದ ಡಾ ಅಂಕುರನ್ ದತ್ತಾ ಮಾತನಾಡಿ ಕನ್ನಡ ಸಿನೆಮಾ ಕಾರ್ಯಾಗಾರ ನಮ್ಮಲ್ಲಿ ಸಂಭ್ರಮ ಮೂಡಿಸಿದೆ ಎಂದರು.
ಡಾ ನಾಗತಿಹಳ್ಳಿ ಚಂದ್ರಶೇಖರ್ ಅವರು ಕನ್ನಡ ಸಿನೆಮಾಗಳ ಮಹತ್ವ, ಪ್ರಯೋಗಶೀಲತೆ, ಖ್ಯಾತಿಯ ಕುರಿತು ಮಾತನಾಡಿದರು.
ಸಿನಿಮಾಟೋಗ್ರಾಫರ್ ಎಸ್.ಕೆ. ರಾವ್, ನಟಿ ಕಾವ್ಯಾ ಶೆಟ್ಟಿ, ನಟ ನಿರೂಪ್ ಭಂಡಾರಿ ತಮ್ಮ ಕ್ಷೇತ್ರಗಳ ಬಗ್ಗೆ ಮಾತನಾಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಪತ್ರಕರ್ತರಾದ ಮದನ್ ಗೌಡ, ಜಿ.ಎನ್.ಮೋಹನ್ ಹಾಗೂ ನಿರ್ಮಾಪಕ ಶಂಕರೇ ಗೌಡ ಉಪಸ್ಥಿತರಿದ್ದರು.
ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರ ಚಲನಚಿತ್ರ ಉತ್ಸವ ಮೇ 2ರಂದು ಉದ್ಘಾಟನೆಯಾಗಲಿದೆ.





































0 Comments