ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀಪಾದ ಭಟ್ಟರ ‘ದಡವ ನೆಕ್ಕಿದ ಹೊಳೆ’ ಬಿಡುಗಡೆ ಫೋಟೋ ಆಲ್ಬಂ…

‘ಬಹುರೂಪಿ’ ಪ್ರಕಟಣೆ, ಶ್ರೀಪಾದ ಭಟ್ಟರ ರಂಗ ಪಯಣದ ಕಥನ ‘ದಡವ ನೆಕ್ಕಿದ ಹೊಳೆ’ ಬಿಡುಗಡೆ.

ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ಮಂಡ್ಯ ರಮೇಶ್ ನೇತೃತ್ವದ ‘ನಟನ ರಂಗಶಾಲೆ’ಯಲ್ಲಿ ವಿಶ್ವ ರಂಗಭೂಮಿ ದಿನದ ಅಂಗವಾಗಿ ಕೃತಿ ಬಿಡುಗಡೆ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಖ್ಯಾತ ನಟ ಪ್ರಕಾಶ ರೈ ಕೃತಿ ಬಿಡುಗಡೆ ಮಾಡಿದರು.

ರಂಗಕರ್ಮಿ ರಾಮೇಶ್ವರಿ ವರ್ಮ, ನಟ ಬಿ.ಸುರೇಶ್, ಲೇಖಕಿ ದೀಪಾ ಹಿರೇಗುತ್ತಿ ಉಪಸ್ಥಿತರಿದ್ದರು..

ನಂತರ ‘ಪಯಣ’ ರೆಪರ್ಟರಿ ತಂಡದ ಹೊಸ ಪ್ರಯೋಗ ‘ಕಣಿವೆಯ ಹಾಡು’ ನಾಟಕ ಪ್ರದರ್ಶನ ಮಾಡಲಾಯಿತು.

ರಚನೆ ಅತೊಲ್ ಫ್ಯೂಗಾರ್ಡ್ ಅವರದ್ದು. ಡಾ.ಮೀರಾ ಮೂರ್ತಿ ಕನ್ನಡಕ್ಕೆ ಅನುವಾದಿಸಿದ್ದು, ಅನುಷ್ ಶೆಟ್ಟಿ ಮತ್ತು ಮುನ್ನ ಮೈಸೂರು ಸಂಗೀತ ಸಂಯೋಜಿಸಿದ್ದಾರೆ. ನಟನದ ಮೇಘ ಸಮೀರ ಮತ್ತು ದಿಶಾ ರಮೇಶ್ ಅಭಿನಯಿಸಿದ್ದು, ರಂಗತಜ್ಞ ಡಾ.ಶ್ರೀಪಾದ ಭಟ್ ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದಾರೆ. ಮೂಲತಃ ದಕ್ಷಿಣ ಆಫ್ರಿಕಾ ನೆಲದ ಕತೆ ಇದು. ತಮ್ಮದೇ ನೆಲದಲ್ಲಿ ಪರಕೀಯರಾಗುತ್ತಾ, ಗುಲಾಮರಾಗುತ್ತಾ ಹೋಗುತ್ತಿರುವ ಮೂಲನಿವಾಸಿಗಳ ಬದುಕಿನ ಚಿತ್ರಣವನ್ನು ಹೊಂದಿದೆ.

‘ದಡವ ನೆಕ್ಕಿದ ಹೊಳೆಕೃತಿಯನ್ನು ಕೊಳ್ಳಲು https://bit.ly/3lTMPVm ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

‍ಲೇಖಕರು avadhi

30 March, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading