ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀನಿಧಿ ಡಿ ಎಸ್ ಕವಿತೆ: ಜೀವಯಾನವೆಂದರೆ..

ಶ್ರೀನಿಧಿ ಡಿ ಎಸ್

ತುಂತುರು ಹನಿಗಳು


ಕಾಲು ಕಾಯುವ ಪಾದರಕ್ಷೆ

ತಿಳಿಸುತ್ತದೆ ನಡೆದು

ಬಂದ ದಾರಿ

ಬೇಡದ ಭೂತಕ್ಕೆ ಹೇಳಿ ವಿದಾಯ

ಓಡಿದರೆ ಕಾಣುವುದು

ವಿಸ್ತಾರ ಹೆದ್ದಾರಿ

.

ಜೀವನ ಮಿಠಾಯಿ ಡಬ್ಬ

ಸಿಕ್ಕೀತು ಒಂದಲ್ಲ ಒಂದು

ಸಿಹಿ,

ತೆರೆದರೆ ಮುಚ್ಚಳ

.

ಸುಮ್ಮನೆ ಸಂತೈಸಿದರೆ ಸಿಗುವ

ಶಾಂತಿಗೆ

ಉದ್ದೇಶವಿಲ್ಲದ ಸಹಾಯಕ್ಕೆ

ಸಿಡುಕಿನ ಮುಖಕ್ಕೆ ದೊರಕುವ

ಕಿರುನಗೆಯ ಉತ್ತರಕ್ಕೆ

ಇಲ್ಲ ಯಾವ ನಿಘಂಟಿನಲ್ಲೂ ಅರ್ಥ

.

ಕಲಿತುಕೊಳ್ಳುತ್ತ ಹೋದರೆ

ಒಂದರ ನಂತರ

ಮತ್ತೊಂದ

ಕಾಣುವುದು ಹೊಳೆವ ತಾರೆಗಳ

ಹೊಸ ಆಕಾಶ

.

ಜೀವಯಾನ, ಎಲ್ಲ ಸಿದ್ಧತೆಗಳ

ನಂತರದ ಪಯಣ

ಅಥವ, ಸುಮ್ಮಗೆ

ಬೀಸಿದ ಗಾಳಿಗೆ ಹಾರಿದ ಪುಕ್ಕ

.

ಕೊನೆಗುಳಿಯುವುದು ಮಾತ್ರ

ದಕ್ಕಿದ

ನೆಮ್ಮದಿಗಳ ಲೆಕ್ಕ

 

‍ಲೇಖಕರು G

2 May, 2011

3 Comments

  1. savitri

    nice poem!!!

    • ಶ್ವೇತಾ

      ಚೆನ್ನಾಗಿದೆ ಕವನ, 3 ನೇ ಪ್ಯಾರಾ ತುಂಬ ಇಷ್ಟ ಆಯ್ತು. ಕವನದಲ್ಲಿರೋ positive energy ಓದಕ್ಕೆ ಖುಷಿ ಕೊಡತ್ತೆ.

  2. Shreenidhids

    Thankz avadhi!

    Savitri and ಶ್ವೇತಾ- dhanyavadagaLu..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading