ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶೃತಿ ಮೇಲುಸೀಮೆ ಕವಿತೆ – ಹಾದಿಕಲ್ಲು..

ಶೃತಿ ಮೇಲುಸೀಮೆ

ಹರುಕು ಮುರುಕು ಚಪ್ಪರ
ನಿತ್ಯ ಜಂಜಾಟದ ಬದುಕು
ಇದ್ದ ಜಾಗದಲ್ಲಿ
ಕಾಲು ಚಾಚಾಲು ಬಲು ಕಷ್ಟ
ಮಳೆ ಬಂತೆಂದರೆ
ಇಡೀ ಗುಡಿಸಲಲ್ಲಿ ಜಿನುಗುವ ಕಾರಂಜಿ

ಹೊಟ್ಟೆಗೆ ಹಿಟ್ಟಿಲ್ಲ ಅಂದರೆ
ನಮ್ಮ ನೆಂಟರಿಷ್ಟರೇ ನಮಗೆ ಅಪರಿಚಿತರು
ಅವರು ಹಬ್ಬ ಹರಿದಿನಗಳಲ್ಲಿ
ಅಪ್ಪಿ ತಪ್ಪಿ ಬಂದರೆ
ಅವರ ದೊಡ್ಡಸ್ತಿಕೆಗಳಲ್ಲಿ
ನಮ್ಮ ಮನೆ ಶಯನ ಗೃಹ

ಬಡತನವು ಬೇಗೆಯಲ್ಲ
ನಮ್ಮ ದೌರ್ಬಲ್ಯಗಳನು
ಸಾಮರ್ಥ್ಯಗಳಾಗಿಸಿಕೊಂಡು
ಮೆಟ್ಟಿ ನಿಂತರಷ್ಟೆ
ಇಲ್ಲಿ ಜೀವನ

ನಮ್ಮ ಹಾದಿಯ ಕಲ್ಲನು
ಜೀವನದುದ್ದಕ್ಕೂ ನಾವೇ ಹೊರಬೇಕಿದೆ
ನಮಗಾಗಿ ದಾರಿ ರೂಪಿಸಲು
ನಮ್ಮ ಧೈರ್ಯವೇ ನಮ್ಮ ಹೆಗಲು
ನಮ್ಮ ಕನಸುಗಳೇ ನಮಗೆ ಆಸರೆ

‍ಲೇಖಕರು avadhi

28 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading