ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಿವರಾಜ ಬೆಟ್ಟದೂರು ಕವಿತೆ: ಸೆರಗು ಹೊಚ್ಚುವ ಮುನ್ನ..

ಶಿವರಾಜ ಬೆಟ್ಟದೂರು

  ಮಂಜು ಮುಸುಕದ ಸಂಜೆ ರಾತ್ರಿ, ತನ್ನ ನೀಲಿ ಸೆರಗು ಹೊಚ್ಚುವ ಮುನ್ನದ ಸಂಜೆ ಆ ಹಾದಿಯಲ್ಲಿ ನಾನು…   ಕಾಲ್ದಾರಿಗುಂಟ ಸೀಳುದಾರಿ ಯಾರೂ ಹಾಯದ ಕುರುಚಲು ಗುಡ್ಡ ಪೂರ್ಣ ಬೆಳದಿಂಗಳು ರಾತ್ರಿ ಲಕಲಕಿಸುವ ಲಚ್ಚಿ ಅಂಗೈಯಲ್ಲಿ ಟಾಚರ್ು ಹಿಡಿದವಳಂತೆ ನನ್ನ ಮುಂದೆ ಮುಂದೆ

ಮಾರಾಯನ ಬಂಡೆ, ಗವ್ವೆನ್ನುವ ಗುಹೆ ಗೋಧಿ ಕಾಳಿನ ಮೈಯ ಜಾಡು ಸಿಗದ ಸೀಗರದ ಕಿರುದಾರಿ ಜಾಲಿಯನು ತೂರಿ ನಡೆಯುವಾಗ ನೆಟ್ಟ ನೆಗ್ಗಿನ ಮುಳ್ಳು ಅವಳ ತುದಿಗಾಲನ್ನು ಘಾಸಿ ಮಾಡಿತು   ಒಂದೊಂದೇ ನೆಗ್ಗಿನ ಮುಳ್ಳನು ಆಯ್ದು ಒಸರುವ ರಗುತವನು ಉಗುಳ ಮುಲಾಮಿನಿಂದ ಸವರಿ ನಡೆದೆ ನಡೆದೆ ಇನ್ನೂ ಎತ್ತರದ ಗಿರಿಪರ್ವತದ ತುಟ್ಟಾನು ತುದಿಗೆ   ಜಡೆಯಂತೆ ಇಳಿಬಿದ್ದ ಆಲದ ಮರ ಅದರಡಿಯಲ್ಲಿ ಲಚ್ಚಿ ಮತ್ತು ನಾನು ಬಹಳ ಹೊತ್ತು ಕಳ್ಳ ಪೋಲೀಸು ಆಟ ಆಡುತ್ತಿದ್ದಾಗ ಇನ್ನೇನು ಸಿಕ್ಕು ಬೀಳುವ ಹೊತ್ತಲ್ಲಿ ಮರದ ಬಳಿ ಅವಳು ಮರದ ಹಾಗೆ ನಿಂತು ತೋರಿದಳು ಬೇರು ಕಾಂಡ ಚಿಗುರು ಎಲೆಗಳನ್ನು ಕಾಯಿ ಹಣ್ಣಾಗುವ ಬಗೆಯನ್ನು ಒಂದೊಂದಾಗಿ ಕೀಳುವಂತೆ ಹೂವಿನ ಪಕಳೆಗಳನ್ನು ಕಳಚಿ ಎಸೆದಳು ತನ್ನ ಒಳಉಡುಪುಗಳನ್ನು ಬೆರಗುಗಣ್ಣಿನಿಂದ ನೋಡುವ ನನ್ನೆಡೆಗೆ   ನಿರಾಳ ನಗ್ನತೆಯಲ್ಲಿ ನಿಂತೇ ಇದ್ದಳು ಅವಳು ಬಂದೂಕು ಕಣ್ಣಿಗೆ ಮೈ ಕೊಟ್ಟು ನಿಂತೇ ಇದ್ದಳವಳು ಶಿಲಾಬಾಲಿಕೆಯಂತೆ ಮನದ ಹತ್ತಿ ಬಣವೆಗೆ ನೋಟದ ಕಿಡಿ ಎಸೆದು   ಕಣ್ಣಿಗೆ ಕಣ್ಣು ಕೂಡಿಸಲಾಗಲಿಲ್ಲ ಅವಳು ಅವಳಾಗಿರಲಿಲ್ಲ ನನ್ನ ದೇಹ ಚೂಪು ಚೂಪಾದ ಕೊಡಲಿಯೇಟಿಗೆ ಉರುಳಿ ಬಿದ್ದ ಬೊಡ್ಡೆಯಂತೆ ಲಕ್ವಾ ಹೊಡೆದಂತಿರುವ ಕೈ ಕಾಲುಗಳು ಸಾಗರ ಬಿದ್ದು ಅಂಬೆಗಾಲಿಡುತ್ತ ‘ತಾಯಿ’ ಎಂದೆ, ಮಾಯವಾದಳವಳು ತಂಗೀ ಎಂದೆ, ಕತ್ತಲಾವರಿಸಿತು ಮಗಳೇ ಎಂದೆ, ಕೊಕಾಸಿ ನಗುವದು ಕೇಳಿತು ಮ್…ಮ್…ಮಾ…ಯೆ ಅಂದೆ,ತುಟಿ ಅದರಿ ಮಾತು ಹೊರಡಲಿಲ್ಲ   ಆಕಾಶದಂಚಿನಲಿ ಚಂದಿರನ ಕಪ್ಪಿಟ್ಟ ಮುಖ ಮಿಣ ಮಿಣುಕು ಹುಳುಗಳ ಮೆರವಣಿಗೆ ತೆವಳಿದೆ ಸರೀಸೃಪದ ಹಾಗೆ ಸಿಕ್ಕ ಸಿಕ್ಕ ಕಡೆಗೆ   ಮರುದಿನದ ಸೂರ್ಯ ಬೆಂಬತ್ತಿ ಬಂದಾಗ ಕಾಮದ ಕಡಾಯಿಯಂಥ ನೆಲದ ಮೇಲೆ ಆಕಾಶ ಛತ್ರಿಯ ಕೆಳಗೆ ಮಲಗಿದ್ದಳವಳು ನೆಲದುದ್ದಕ್ಕೆ ಅಷ್ಟಗಲ]]>

‍ಲೇಖಕರು G

13 February, 2012

4 Comments

  1. MUDIRAJA

    sir kavithe tumba chennagide. balyada dinagala nenapina lokakke tegedukondu hogiddiri

  2. Ramesh Aroli

    ಕವಿತೆ ಚೆನ್ನಾಗಿದೆ, ನಿಮ್ಮ ಕಾವ್ಯ ಕೃಷಿ ಇನ್ನೂ ಫಲವತ್ತಾಗಿ ಬೆಳೆದು ಸೀಗರದ ಕಿರುದಾರಿಯಲ್ಲಿ ಗೋಧಿ ಕಾಳಿನ ಮೈಯ ಜಾಡು ಸಿಗಲೆಂದು ಹಾರೈಸುವ.
    -ರಮೇಶ ಅರೋಲಿ

  3. Ravi

    sir kavite odide, ista aaytu, mattomme odide

  4. ramu

    kavite chennagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading