ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಿವಯೋಗಿ ಕಳ್ಳಿಮಠ ಹೊಸ ಕವಿತೆ – ಮಳ್ಳು…

ಶಿವಯೋಗಿ ಕಳ್ಳಿಮಠ

ಮೊಹರಂ ಕುಣಿತದಲ್ಲಿ
ಕದ್ದು ಕದ್ದು ನೋಡುತ್ತಾನೆ.
ಅವನಿನ್ನೂ
ಮಳ್ಳು.
ನನ್ನ ಗಂಡನ‌
ಹಾಗೆ.

ಹೆಂಗಸರ ಸುಖಗಳಿಗೆ
ನೆಪ ಸರಳವೇ.
ಗಂಡಸಿಗೆ
ಅದೇ ಗೊಂದಲ.
ನೋವು
ಎಷ್ಟೇ ಆಳದ್ದಿರಲಿ
ಇಲಾಜು
ದೊಡ್ಡದೇನು
ಇರುವುದಿಲ್ಲ.

ಎದೆಯಲ್ಲಿ ಮುಳ್ಳು
ಲಟಕ್ಕೆದು ಮುರಿದ ಹಾಗೇನು
ಆಗುವುದಿಲ್ಲ
ಈಗ.
ಸಂಜೆಗಳು ತುಸು
ಕಷ್ಟವೆನಿಸಿದರೂ,
ನಾನು
ರಾತ್ರಿಗಳ
ದಾಟಿದ್ದೇನೆ.

ಹುಟ್ಟಿದ ಮಗನಿಗೆ
ಅವನ ಹೆಸರು
ಇಡಲಿಲ್ಲ ನಿಜ.
ಆದರೆ
ಅವನಿಗೆ ಬೇರೆ
ಮದುವೆಯಾಗಲು
ಗದರಬೇಕೆಂದೆ.

ಅಕ್ಕನ ಗತ್ತು ನನಗೆ.
ಹೀಗನಿಸದಕ್ಕೆ ಆಶ್ಚರ್ಯಗೊಂಡು
ಗೆಳೆತಿಯ ಕೇಳಿದೆ,
ಹೊಸದೇನಲ್ಲ ಇದು
ಹೆಂಗಸರ ಗುಟ್ಟೆಂದಳು.

‍ಲೇಖಕರು Admin

11 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading