ಮಹೇಶ್ ಸಣ್ಣಗಿರಿ
ಶಿಕ್ಷಕ ರಾಷ್ಟ್ರವನ್ನು ನಿರ್ಮಾಣ ಮಾಡುವ ಶಿಲ್ಪಿ. ಪೂಜಾರಿಯ ಪ್ರಭಾವದಿಂದ ಒಂದು ಕಲ್ಲು ಹೇಗೆ ಶಿವ ಸ್ವರೂಪವನ್ನು ಪಡೆಯುತ್ತದೆಯೋ ಅದೇ ರೀತಿ ಒಬ್ಬ ಶಿಕ್ಷಕನ ಪ್ರಭಾವದಿಂದ ಶಿಷ್ಯನು ಸುಶಿಕ್ಷಿತ ವ್ಯಕ್ತಿಯಾಗಿ ಮಾರ್ಪಾಡಾಗುತ್ತಾನೆ.ಇಂತಹ ಸುಶಿಕ್ಷಿತ ಸಮಾಜದಲ್ಲಿ ಗೌರವ ಸ್ಥಾನ ಮಾನಗಳು ಇರುವುದರಿಂದ ಶಿಕ್ಷಕನ ಮಹತ್ವ ಪ್ರಧಾನವಾದುದಾಗಿದೆ.
ಪ್ರಾಚೀನ ಕಾಲದಲ್ಲಿ ಶಿಕ್ಷಕನನ್ನು ಗುರು ಎಂದು ಕರೆಯುತ್ತಿದ್ದರು. ಅಂದಿನ ಗುರುವೇ ಇಂದಿನ ಶಿಕ್ಷಕ. ಶಿಕ್ಷಕ ಎಂದರೆ ಕಲಿಸುವವ ಅಥವಾ ತಿಳಿಸುವವ ಎಂದಾಗುತ್ತದೆ. ಇದಲ್ಲದೆ ಗುರು, ಭೋಧಕ, ಅಧ್ಯಾಪಕ ಉಪಾಧ್ಯಾಯ, ಆಚಾರ್ಯ ಎಂಬ ನಾನಾರ್ಥಗಳಿವೆ. ಅದುದರಿಂದ ಶಿಕ್ಷಕ ಉತ್ಸಾಹಿಯು, ದಯಾಮಯಿಯು, ಹೊಂದಿಕೊಳ್ಳುವ ಗುಣವುಳ್ಳವನು, ಸಹಕಾರಿಯು, ತಾಳ್ಮೆಯುಳ್ಳವನು, ಎಲ್ಲ ವಿಷಯವನ್ನು ತಿಳಿದವನು, ಜವಾಬ್ದಾರಿಯನ್ನು ಅರಿತವನು, ಸಮಯನಿಷ್ಟನು, ಪ್ರಾಮಾಣಿಕನು, ಧೈರ್ಯಶಾಲಿಯೂ ಆಗಿರಬೇಕು. ತನ್ನ ತನವನ್ನು ಬೆಳಸಿಕೊಂಡು ವಿಚಾರಲೋಚನೆ, ಪ್ರಯೋಗ, ಸಂಶೋಧನೆ, ವೀಕ್ಷಣೆಗಳಿಂದ ಜ್ಞಾನದ ದಿಗಂತವನ್ನು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕನಾಗಿ ಹಿರಿದಾಗಿಸುತ್ತ ತನ್ನ ಶೀಲವಂತಿಕೆಯಿಂದ ವಿದ್ಯಾರ್ಥಿಗಳಲ್ಲಿ ನೈತಿಕ ಜಾಗೃತಿಯನ್ನುಂಟುಮಾಡುವವನೇ ಶಿಕ್ಷಕ.

ಶಿಕ್ಷಣ ಎಂಬ ಸೌರವ್ಯೂಹದಲ್ಲಿ ಶಿಕ್ಷಕ ಸುರ್ಯನಿದ್ದಂತೆ. ಆದರೆ ಪ್ರತಿಯೊಂದು ಜೀವರಾಶಿ ಬದುಕಲು ಸೂರ್ಯ ಹೇಗೆ ಅವಶ್ಯವೋ ಹಾಗೆಯೇ ಶಿಕ್ಷಕ ಮನುಕುಲಕ್ಕೆ ಚೇತನ ತುಂಬುವ ಸಂಜೀವಿನಿ. ಶಿಕ್ಷಕನು ಮಗುವನ್ನು ವಿಶ್ವಮಾನವನನ್ನಾಗಿ ಪರಿವತರ್ಿಸುತ್ತಾನೆ. ನವ ಸಮಾಜವನ್ನು ಸೃಷ್ಟಿಸುತ್ತಾನೆ. ಆದುದರಿಂದ TEACHER IS A REAL MAKER OF HISTORY ಎಂದು ಹೇಳುವುದು.
ಶಿಕ್ಷಕರು ವಿದ್ಯಾರ್ಥಿಗಳಿಗೆ ಮೌಲ್ಯಗಳನ್ನು ಬೆಳಸಿಕೊಳ್ಳುವಂತೆ ಮಾರ್ಗದರ್ಶನ ನೀಡಬೇಕು. ಕೆಟ್ಟದ್ದು ಯಾವುದು? ಒಳ್ಳೆಯದ್ದು ಯಾವುದು? ಎಂಬುದರ ಬಗ್ಗೆ ಶಿಕ್ಷಕರು ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು. ಹೇಗೆ ಕಲಿಯಬೇಕು? ಕಲಿತದ್ದನ್ನು ಹೇಗೆ ಮನನ ಮತ್ತು ಸ್ಮರಣೆ ಮಾಡಬೇಕು? ಹೇಗೆ ಪರೀಕ್ಷೆ ಎದುರಿಸಬೇಕು? ಎಂಬುದರ ಬಗ್ಗೆ ಸುದೀರ್ಘ ಮಾರ್ಗದರ್ಶನ ನೀಡುವುದು ಶಿಕ್ಷಕನ ಕರ್ತವ್ಯವಾಗಿದೆ.
ಮಕ್ಕಳ ಪ್ರತಿಭೆಗಳನ್ನು ಗುರ್ತಿಸುವಂತಹ, ಹಾಗೂ ಮಕ್ಕಳ ಅಭಿವೃದ್ದಿಯನ್ನು ಶ್ರೇಯಸನ್ನು ಕಂಡು ಹೆಮ್ಮೆ ಪಡುವಂತಹ ಪ್ರೋತ್ಸಾಹಗಾರ ಶಿಕ್ಷಕ. ಅಷ್ಟೇ ಅಲ್ಲದೆ ವಿವಿಧ ಕಾರ್ಯಗಳ ಬಗ್ಗೆ ಮಾರ್ಗದರ್ಶನವನ್ನು ನೀಡುವಂತಹ ನಿರ್ದೇಶಕ. ಶಾಲಾ-ಅಭಿವೃದ್ಧಿ ಕಾರ್ಯದಲ್ಲಿ ಭಾಗವಹಿಸುವಂತಹ ಸಮಾಜದ ಅವಶ್ಯಕತೆಗಳನ್ನು ಪೂರೈಸುವಂತಹ ಮಧ್ಯವರ್ತಿ. ಶಿಕ್ಷಕನು ಶಿಕ್ಷಣ ಕ್ಷೇತ್ರದ ಮಹಾನ್ ಸಾಧಕ.
ಶಿಕ್ಷಕ ಮಕ್ಕಳು ಮತ್ತು ಸಮುದಾಯದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವಂತಹ ಸಮಾಜದ ಅತಿ ದೊಡ್ಡ ನೆಂಟ. ಸಮಾಜ ಸೇವೆಯಲ್ಲಿ ನಿರತನಾದ ಸಮಾಜ ಸೇವಕ. ಶಿಕ್ಷಕನು ಹಲವು ಕೌಶಲ್ಯಗಳುಳ್ಳ ವ್ಯಕ್ತಿ ಇವನು ಮಾರ್ಗದರ್ಶಕನಾಗಿ, ತತ್ವಜ್ಞಾನಿಯಾಗಿ, ಆಡಳಿತಗಾರನಾಗಿ,ಭೋಧಕನಾಗಿ ಸಮಾಜ ಸೇವಕನಾಗಿ ಸ್ನೇಹಿತನಾಗಿ, ಮಾರ್ಗದರ್ಶಕನಾಗಿ, ಮೇಲ್ವಿಚಾರಕನಾಗಿಯೂ ತನ್ನ ವಿವಿಧ ಪಾತ್ರವನ್ನೂ ನಿರ್ವಹಿಸುತ್ತಾನೆ.
ಅರ್ಚಕನು ಯಾವ ರೀತಿ ತನ್ನ ಪ್ರಭಾವದಿಂದ ಶಿಲೆಯನ್ನು ದೇವರನ್ನಾಗಿಸುತ್ತಾನೆಯೋ, ಅದೆ ರೀತಿ ಶಿಕ್ಷಕ ತನ್ನ ಪರಿಶ್ರಮದಿಂದ ಅಂಧಕಾರ ತುಂಬಿದ ಮಕ್ಕಳನ್ನು ಬುದ್ಧಿವಂತರನ್ನಾಗಿಸುತ್ತಾನೆ. ಆದ್ದರಿಂದಲೇ ಪುರಂದರದಾಸರು ತಮ್ಮ ಕೀರ್ತನೆಯಲ್ಲಿ ಹೇಳಿದ್ದಾರೆ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ. ಆದುದರಿಂದ ಶಿಕ್ಷಕನನ್ನು ಸುಶಿಕ್ಷಿತ ಸಮಾಜದ ಕರ್ತೃ ಎನ್ನಬಹುದು.






ಮಾನ್ಯರೇ ನಿಮ್ಮ ಲೇಖನಕ್ಕೆ ಸ್ವಾಗತ. ನಿಮ್ಮ ಲೇಖನದಲ್ಲಿ ನಮೂದಿಸಿದ್ದು ಒಬ್ಬ ಆದರ್ಶ ಉಪಾಧ್ಯಾಯರಿಂದ ಸಮಾಜ ಅಪೇಕ್ಷೆ ಆಗಿರಬೇಕು ಎನ್ನುವುದು ಆಗಿದೆ. ಆದರೆ ವಾಸ್ತವಾಗಿ ಪೋಷಕ ಸಮುದಾಯ ಉಪಾಧ್ಯಾಯರಿಂದ ಏನನ್ನು ನಿರೀಕ್ಷಿಸುತ್ತಿದೆ? ಅಧ್ಯಾಪಕರು ಮಕ್ಕಳ ಸಹಜವಾದ ಸರ್ವತೋಮುಖವಾದ ಬೆಳವಳಿಗೆಗೆ ಹೇಗೆ ನೆರವಾಗುತ್ತಿದ್ದಾರೆ? ಎಂಬುದು ಬಹುಷಃ ತೆರೆದು ನೋಡಬೇಕಾದ ಅಂಶ ಅನ್ನಿಸುತ್ತದೆ.ಸ್ಪರ್ಧೆಯಲ್ಲಿ ಗೆಲ್ಲುವ ಅಂಕ ಗಳಿಸುವ ಮೆಶಿನುಗಳನ್ನು ತಯಾರಿಸಬೇಕೆಂಬ, ಅದರಲ್ಲೂ ಇಂಗ್ಲೀಷ್ನಲ್ಲೇ ತಯಾರಾಗಬೇಕು ಎಂಬ ನಿರೀಕ್ಷೆಗೆ ಸವಾಲು ಹಾಕುವುದು ಎಲ್ಲಿ? ಮಕ್ಕಳ ವಯೋ ಸಹಜವಾದ ಬೆಳೆವಣಿಗೆಗೆ ಮಾರ್ಗದರ್ಶನ ಮತ್ತು ಅವಕಾಶ ಎಲ್ಲಿ?
ಗಣಪತಿ.ಎಂ.ಎಂ