ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಾಸನ Renovation….

shivaprasad

ಶಿವಪ್ರಸಾದ್ 

ಕೆಲವೊಮ್ಮೆ ಹೀಗೂ ಆಗುತ್ತೆ

ಜನ ಬುದ್ದಿವಂತಿಕೆಯನ್ನ ಅತಿಯಾಗಿ ಉಪಯೋಗಿಸಿದಾಗ ಹೀಗಾಗುತ್ತದೆ ಎಂಬುದಕ್ಕೆ ಒಂದು ಸುಂದರ ನಿದರ್ಶನ

ಕರ್ನಾಟಕದ ಗಡಿ ಭಾಗದಲ್ಲಿರುವ ಗೌರಿಬಿದನೂರಿನ ಬಳಿ ಒಂದು ಹಳೆಯ ಶಾಸನವನ್ನು ಊನಗೊಳಿಸಿ ಯಾವುದೋ ಮೂಲೆಗೆ ಬಿಸಾಡಲಾಗಿತ್ತು

ಇದರಿಂದಾಗಿಯೇ ಊರಿಗೆ ಕೆಟ್ಟದಾಗುತ್ತಿದೆ ಎಂದು ಕೆಲ ಮರಳರು ಮತ್ತೆ ಅದೇ ಶಾಸನವನ್ನು ತಮಗಿಷ್ಟ ಬಂದಂತೆ ಕೊರೆದು ಮರುಲಿಪ್ಯಂತರಿಸಿದ್ದಾರೆ.

ಶಾಸನವನ್ನು ಹದಗೆಡಿಸಿ ಅಷ್ಟೇ ಅಲ್ಲದೆ ಹೂ ಹಣ್ಣು ಕಾಯಿ ಮಾಡಿಸಿ ಸಕಲ ಪೂಜಾ ಕೈಂಕರ್ಯಗಳನ್ನು ಮಾಡಿಸಿ, ಚೆರುಪು ಹಂಚಿ ಹಸಿದ ಒಂದತ್ತು ಜನಕ್ಕೆ ಊಟವನ್ನೂ ಹಾಕಿಸಿದ್ದಾರೆ.

ಇಂತಪ್ಪ ಕಲಿಗಳ್ ಕರುನಾಡೊಳ್ .. ಜೈ ಮಾದೇಸ್ವರ..

‍ಲೇಖಕರು Admin

3 May, 2016

1 Comment

  1. ವಿಜಯೇಂದ್ರ.ಕುಲಕರ್ಣಿ ( ಮಳ್ಳಿ) ಕಲಬುರಗಿ

    ಕಳೆದ 20 ವರ್ಷಗಳಿಂದ ಪುರಾತನ ದೇಗುಲ ಶಾಸನಗಳನ್ನು ಅರಸಿ
    ಹಳ್ಳಿ ಹಳ್ಳಿ ತಿರುಗುತ್ತ
    ಲೇಖನ ಬರೆಯುತ್ತಿರುವ ನಾನು,ಇಂತಹ ದುಸ್ಥಿತಿಯಲ್ಲಿರುವ
    ಹಲವಾರು ಶಾಸನಗಳನ್ನು
    ನೋಡಿದ್ದೇನೆ.
    ಕೆಲವು ಕಡೆ ಬಟ್ಟೆ ಒಗೆಯಲು
    ಕೊಡಲಿ ಮಸೆಯಲು ಶಾಸನ ಬಳಸಿ ಕೊಂಡಿದ್ದು ಇದೆ.
    ಮೂಢ ನಂಬಿಕೆಯಿಂದ ಅದರ ಮೇಲೆ ಎಣ್ಣೆ ಹಾಕಿ ಪೂಜಿಸುತ್ತಾರೆ.
    ವಿಜಯಪುರದಲ್ಲಿ ಶೌಚಕೂಪದಲ್ಲಿದ್ದ(ಅರಕಿಲ್ಲೆ ಪ್ರದೇಶ)
    ಶಿಲಾಶಾಸನಗಳ ಬಗ್ಗೆ ಸುಧಾ ದಲ್ಲಿ ಬರೆದಾಗ ಅವನ್ನು
    ಸ್ವಚ್ಛಗೊಳಿಸಲಾಗಿತ್ತು.ಈಗ
    ಪರಿಸ್ಥಿತಿ ಏನಾಗಿದೆಯೋ ಗೊತ್ತಿಲ್ಲ.
    ವಿಜಯೇಂದ್ರ.ಕುಲಕರ್ಣಿ ( ಮಳ್ಳಿ) ಕಲಬುರಗಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading